ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕುಳಿತ ಕುರ್ಚಿ ಫೋಟೋ ವೈರಲ್; ಸಾಮಾಜಿಕ ಜಾಲತಾಣದಲ್ಲಿ ಚರ್ಚೆ | CM Rekha Gupta

ಸಿಎಂ ರೇಖಾ ಗುಪ್ತಾ ಕುಳಿತಿರುವ ಕುರ್ಚಿ
ಸಿಎಂ ರೇಖಾ ಗುಪ್ತಾ ಕುಳಿತಿರುವ ಕುರ್ಚಿ
Published on
ನವದೆಹಲಿ: ದೆಹಲಿಯ ಬಿಜೆಪಿ ಮುಖ್ಯಮಂತ್ರಿ ರೇಖಾ ಗುಪ್ತಾ(CM Rekha Gupta) ತಮ್ಮ ಕಚೇರಿಯಲ್ಲಿ ಕುಳಿತುಕೊಂಡಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದುಬಾರಿ ಪ್ರೀಮಿಯಂ ಮಾದರಿ ಕುರ್ಚಿಯ ಚರ್ಚೆ ನಡೆಸಲಾಗುತ್ತಿದೆ.
ನಟ ರಾಕೇಶ್ ಗುಪ್ತಾ ಭೇಟಿ ಮಾಡಿದ ಸಮಯದಲ್ಲಿ ತೆಗೆದುರುವ ಫೋಟೋವನ್ನು ಸ್ವತಃ ಸಿಎಂ ಹಂಚಿಕೊಂಡಿದ್ದರು. ಅಲ್ಲಿ ಅವರು ರೋಡ್ ಓಕ್ ಇಂಪೀರಿಯೊ ಎಕ್ಸಿಕ್ಯೂಟಿವ್ ಚೇರ್ ಮೇಲೆ ಕುಳಿತಿದ್ದಾರೆ. ಇದರ ಬೆಲೆ ಸುಮಾರು 66,000 ರಿಂದ 82,600 ರೂ.ಗಳವರೆಗೆ ಇರುತ್ತದೆ. ಈ ಚೇರ್ ಎಲೆಕ್ಟ್ರಾನಿಕ್ ಮಸಾಜ್, ರಿಕ್ಲೈನಿಂಗ್ ಸೆಟ್ಟಿಂಗ್‌ಗಳು, ಸ್ವಯಂಚಾಲಿತ ಫುಟ್‌ರೆಸ್ಟ್ ಮತ್ತು ಫೋಮ್ ಕುಷನಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಒಂದೆಡೆ, ಖರ್ಚು ಮತ್ತು ದುಂದುವೆಚ್ಚವನ್ನು ಕಡಿಮೆ ಮಾಡಬೇಕೆಂದು ಹೇಳುತ್ತಿರುವ ಬಿಜೆಪಿ ನಾಯಕರು ಇಷ್ಟು ದುಬಾರಿ ಕುರ್ಚಿಯನ್ನು ಹೇಗೆ ಬಳಸಬಹುದು? ಇದು ಸರ್ಕಾರಿ ನಿಧಿಯ ದುರುಪಯೋಗವಲ್ಲವೇ? ಎಂದು ಅನೇಕ ನೆಟಿಜನ್‌ಗಳು ಪ್ರಶ್ನಿಸಿದ್ದಾರೆ.
ಮಾಜಿ ಸಿಎಂ ಕೇಜ್ರಿವಾಲ್ ವಾಸಿಸುತ್ತಿದ್ದ ಮನೆಯನ್ನು ಶೀಶ್ ಮಹಲ್ ಎಂದು ಕರೆದು ಟೀಕಿಸಿದ್ದ ಬಿಜೆಪಿ, ಈಗ ಸ್ವತಃ ತಮ್ಮ ಸಿಎಂ ಐಷರಾಮಿ ಚೇರ್ ಹಾಕಿಕೊಂಡಿರುವುದನ್ನು ಕೆಲವರು ಪ್ರಶ್ನಿಸಿ ಧಿಕಾರಕ್ಕೆ ಬಂದ ನಂತರ ಹೇಳಿದ್ದೆಲ್ಲವೂ ಮರೆತುಹೋಗಿದೆ ಎಂದು ಕಿಡಿಕಾರಿದ್ದಾರೆ.
ಅನೇಕ ಬಿಜೆಪಿ ಬೆಂಬಲಿಗರು ರೇಖಾಗುಪ್ತ ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸಕ್ಕಾಗಿ ಕೋಟ್ಯಂತರ ರೂಪಾಯಿಗಳಲ್ಲಿ ನಿರ್ಮಿಸಿರುವ ಆಧುನಿಕ ವೈಶಿಷ್ಟ್ಯಗಳಿಗೆ ಹೋಲಿಸಿದರೆ ಇದು ಏನೂ ಅಲ್ಲ ಎಂದಿದ್ದಾರೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net