Delhi Blast: ದೀಪಾವಳಿಯಂದೇ ದೆಹಲಿಯಲ್ಲಿ ಬ್ಲಾಸ್ಟ್​ ಮಾಡಲು ನಡೆದಿತ್ತು ಪ್ಲ್ಯಾನ್​​? ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು!

Delhi car blast case
Delhi car blast case
Published on

ಪ್ರಮುಖ ಮುಖ್ಯಾಂಶಗಳು

  • ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣ
  • ದೀಪಾವಳಿಯಂದೇ ದೆಹಲಿಯಲ್ಲಿ ಬ್ಲಾಸ್ಟ್​ ಮಾಡಲು ನಡೆದಿತ್ತು ಪ್ಲ್ಯಾನ್​​
  • ಪ್ರತಿಯೊಂದು ಕೋನದಿಂದಲೂ ತನಿಖೆ ಮುಂದುವರಿಕೆ
ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣ ( Delhi Blast ) ದೇಶಾದ್ಯಂತ ಭಾರಿ ಆತಂಕ ಸೃಷ್ಟಿ ಮಾಡಿದೆ. ಈ ಘಟನೆಯಲ್ಲಿ ಸುಮಾರು 12 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇದೀಗ ತನಿಖೆ ಮುಂದುವರೆದಿದ್ದು, ಕೃತ್ಯದ ಬಗ್ಗೆ ಒಂದೊಂದೇ ಮಾಹಿತಿ ಬಹಿರಂಗಗೊಳ್ಳುತ್ತಿದೆ.
ಹೌದು, ಸ್ಫೋಟದ ಇಬ್ಬರು ಶಂಕಿತರಾದ ಡಾ.ಮುಜಮ್ಮಿಲ್ ಮತ್ತು ಡಾ. ಉಮರ್ ಈ ಮುಂಚೆಯೇ ಕೆಂಪು ಕೋಟೆಯನ್ನು ಪರಿಶೀಲನೆ ನಡೆಸಿ, ಈ ವರ್ಷದ(2025) ಜನವರಿ 26 ಅಥವಾ ದೀಪಾವಳಿಯಂದೇ ಬ್ಲಾಸ್ಟ್ ಮಾಡಲು ಫ್ಲ್ಯಾನ್ ಮಾಡುತ್ತಿದ್ದರು ಎಂದು ತನಿಖಾ ಸಂಸ್ಥೆಗಳು ತಿಳಿದುಕೊಂಡಿವೆ ಎಂದು ವರದಿ ಉಲ್ಲೇಖಿಸಿದೆ.
ಡಾ.ಮುಜಮ್ಮಿಲ್ ಅವರ ವಿಚಾರಣೆಯ ಸಮಯದಲ್ಲಿ ಈ ಮಹತ್ವದ ಪ್ಲ್ಯಾನ್ ಬಗ್ಗೆ ಬಹಿರಂಗವಾಗಿದೆ.ಈ ಮುಂಚೆಯೇ ಕೆಂಪುಕೋಟೆ ಬಗ್ಗೆ ಮಾಹಿತಿ ಪಡೆದ ಈ ಇವರು ಜನವರಿ 26 ಅಥವಾ ದೀಪಾವಳಿಯಂದು ಸ್ಫೋಟ ಮಾಡಲು ಸಿದ್ಧತೆ ನಡೆಸುತ್ತಿದ್ದರು ಎಂಬ ಮಾಹಿತಿ ಅವರ ಪೋನ್ ಡೇಟಾದಿಂದ ತಿಳಿದು ಬಂದಿದೆ.

ಪ್ರತಿಯೊಂದು ಕೋನದಿಂದಲೂ ತನಿಖೆ

ಸ್ಫೋಟಕ್ಕೆ ಸುಮಾರು 30 ರಿಂದ 40 ನಿಮಿಷಗಳ ಮೊದಲು ಅರುಣಾ ಅಸಫ್ ಅಲಿ ರಸ್ತೆಯಲ್ಲಿ i20 ಕಾರು ನಿಂತಿರುವುದು ಕಂಡುಬಂದಿದೆ. ಆ ಸಮಯದಲ್ಲಿ ಉಮರ್ ಕಾರಿನಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ. ಅಕ್ಟೋಬರ್ 31 ರಂದು ಉಮರ್ ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದ, ಮತ್ತು ಅವನ ಕೊನೆಯ ಸ್ಥಳ ಫರಿದಾಬಾದ್‌ನ ಈ ವಿಶ್ವವಿದ್ಯಾಲಯದಲ್ಲಿ ಕಂಡುಬಂದಿದೆ ಎಂದು ತನಿಕೆಯಿಂದ ಹೊರ ಬಂದಿದೆ.
ಇದುವರೆಗಿನ ಸಿಸಿಟಿವಿ ದೃಶ್ಯಾವಳಿಗಳು ಮತ್ತು ರೋಡ್​ ಮ್ಯಾಪಿಂಗ್‌ನಲ್ಲಿ ಉಮರ್ ಫೋನ್ ಬಳಸುತ್ತಿರುವುದನ್ನು ತೋರಿಸುತ್ತಿಲ್ಲ. ಇದು ಫೋನ್ ಇಲ್ಲದೆ ಕೆಂಪು ಕೋಟೆಗೆ ಸ್ಫೋಟಕಗಳನ್ನು ಸಾಗಿಸಲು ಪೂರ್ವಯೋಜಿತವಾಗಿದೆಯೇ ಅಥವಾ ಉಮರ್ ಬೇರೆ ಸಿಮ್ ಕಾರ್ಡ್ ಬಳಸುತ್ತಿದ್ದನೇ ಮತ್ತು ಆ ಫೋನ್ ಕೂಡ ಸ್ಫೋಟದಲ್ಲಿ ನಾಶವಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಇದೀಗ ಪ್ರತಿಯೊಂದು ಕೋನದಿಂದಲೂ ತನಿಖೆಗಳು ನಡೆಯುತ್ತಿವೆ.

ಯಾರು ಈ ಉಮರ್​?

ಶಂಕಿತ ಡಾ. ಉಮರ್​ ದಕ್ಷಿಣ ಕಾಶ್ಮೀರದ ಪುಲ್ವಾಮದ ನಿವಾಸಿ. ತಮ್ಮ ಮಿಂಚಿನ ಕಾರ್ಯಾಚರಣೆಯಲ್ಲಿ “ವೈಟ್ ಕಾಲರ್” ಟೆರರಿಸ್ಟ್​ ಮಾಡ್ಯೂಲ್‌ ಅನ್ನು ಭೇದಿಸಿದ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಪೊಲೀಸ್ ತಂಡಗಳು, ಸೋಮವಾರ ಬೆಳಗ್ಗೆ ಇಬ್ಬರು ವೈದ್ಯರಾದ ಡಾ. ಆದೀಲ್​ ಅಹ್ಮದ್ ರಾಥರ್​ ಮತ್ತು ಡಾ. ಮುಜಾಮಿಲ್​ ಶಕಿಲ್ ಎಂಬುವರನ್ನು ಬಂಧಿಸಿದರು. ಶಂಕಿತ ಉಮರ್​, ಈ ಇಬ್ಬರು ವೈದ್ಯರ ಸಹಚರನೆಂಬುದು ತಿಳಿದುಬಂದಿದೆ(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net