ದೆಹಲಿ ಕಾರು ಸ್ಫೋಟ ಪ್ರಕರಣ; ಬಂಧಿತ ವೈದ್ಯರಿಗೂ ಹಾಗೂ ವಿಶ್ವವಿದ್ಯಾಲಯಕ್ಕೂ ಯಾವುದೇ ಸಂಬಂಧವಿಲ್ಲ: ಅಲ್- ಫಲಾಹ್ University

university
university
Published on
ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ( Delhi Blast ) ಸಂಬಂಧಪಟ್ಟಂತೆ ವೈದ್ಯರಾದ ಡಾ.ಆದೀಲ್​ ಅಹ್ಮದ್ ರಾಥರ್​ ಮತ್ತು ಡಾ.ಮುಜಾಮಿಲ್​ ಶಕಿಲ್ ಎಂಬ ಇಬ್ಬರು ಶಂಕಿತ ಆರೋಪಿಗಳಾದ ಬಂಧಿಸಿದ್ದಾರೆ. ಇದೀಗ ಈ ವೈದ್ಯರಿದ್ದ ಅಲ್ ಫಲಾಹ್ ವಿಶ್ವವಿದ್ಯಾಲಯದ(University) ಸ್ಪಷ್ಟನೆ ಕೊಟ್ಟಿದೆ.

ವಿವಿಗೂ ಆರೋಪಿಗಳಿಗೂ ಸಂಬಂಧವಿಲ್ಲ

ದೆಹಲಿಯ ಕೆಂಪುಕೋಟೆ ಬಳಿ ನಡೆದ ಘಟನೆ ದುರದೃಷ್ಟಕರ, ಇದರಿಂದ ನಾವು ದುಃಖಿತರಾಗಿದ್ದೇವೆ ಮತ್ತು ಘಟನೆಯನ್ನು ಖಂಡಿಸುತ್ತೇವೆ. ನಮ್ಮ ಇಬ್ಬರು ವೈದ್ಯರನ್ನು ತನಿಖಾ ಸಂಸ್ಥೆಗಳು ಬಂಧಿಸಿವೆ ಎಂದು ನಮಗೆ ತಿಳಿದುಬಂದಿದೆ. ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧಿಕೃತ ಸಾಮರ್ಥ್ಯಗಳಲ್ಲಿ ಕೆಲಸ ಮಾಡುವುದನ್ನು ಹೊರತುಪಡಿಸಿ, ಈ ವ್ಯಕ್ತಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಯಾವುದೇ ಸಂಬಂಧವಿಲ್ಲ" ಅಲ್ ಫಲಾಹ್ ವಿಶ್ವವಿದ್ಯಾಲಯದ ಉಪಕುಲಪತಿ ಭೂಪಿಂದರ್ ಕೌರ್ ಬುಧವಾರ ಹೇಳಿದ್ದಾರೆ.
ಅಪಾರ ಪ್ರಮಾಣದ ಅಮೋನಿಯಂ ನೈಟ್ರೇಟ್ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿದೆ. ಅಂತಹ ಯಾವುದೇ ರಾಸಾಯನಿಕಗಳನ್ನು ಕ್ಯಾಂಪಸ್ ಆವರಣದಲ್ಲಿ ಸಂಗ್ರಹಿಸಲಾಗಿಲ್ಲ. ಇಂತಹ ಎಲ್ಲಾ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಸ್ಪಷ್ಟವಾಗಿ ನಿರಾಕರಿಸುತ್ತೇವೆ ಎಂದಿದ್ದಾರೆ.
ಕೆಲವು ವೇದಿಕೆಗಳು ಆರೋಪಿಸಿರುವ ಯಾವುದೇ ರಾಸಾಯನಿಕ ಅಥವಾ ವಸ್ತುಗಳನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಬಳಸಲಾಗುತ್ತಿಲ್ಲ, ಸಂಗ್ರಹಿಸಲಾಗುತ್ತಿಲ್ಲ ಅಥವಾ ನಿರ್ವಹಿಸಲಾಗುತ್ತಿಲ್ಲ. ವಿಶ್ವವಿದ್ಯಾಲಯದ ಪ್ರಯೋಗಾಲಯಗಳನ್ನು MBBS ವಿದ್ಯಾರ್ಥಿಗಳು ಮತ್ತು ಇತರ ಅಧಿಕೃತ ಕೋರ್ಸ್‌ಗಳ ಶೈಕ್ಷಣಿಕ ಮತ್ತು ತರಬೇತಿ ಅವಶ್ಯಕತೆಗಳಿಗಾಗಿ ಮಾತ್ರ ಮತ್ತು ಪ್ರತ್ಯೇಕವಾಗಿ ಬಳಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.
ದೆಹಲಿಯಲ್ಲಿ ನಡೆದ ಕಾರು ಸ್ಫೋಟದ ಘಟನೆಯಲ್ಲಿ ಸುಮಾರು 12 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇದೀಗ ತನಿಖೆ ಮುಂದುವರೆದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net