ದೆಹಲಿ ಸ್ಫೋಟ: ಕೆಂಪು ಕೋಟೆ ಸ್ಫೋಟ ಪ್ರಕರಣದ ಆತ್ಮಹತ್ಯಾ ಬಾಂಬರ್‌ನ ಸಹಾಯಕನನ್ನು ಬಂಧಿಸಿದ NIA

ದೆಹಲಿ ಕಾರು ಸ್ಫೋಟ
ದೆಹಲಿ ಕಾರು ಸ್ಫೋಟ
Published on
ನವದೆಹಲಿ: ದೆಹಲಿ ಕಾರು ಸ್ಫೋಟ ಪ್ರಕರಣದಲ್ಲಿದ್ದ ಕೆಂಪು ಕೋಟೆ ಬಳಿ ಭಯೋತ್ಪಾದಕ ದಾಳಿ ನಡೆಸಲು ಸ್ಫೋಟಕ ತುಂಬಿದ ಕಾರಿನ ಚಕ್ರದ ಹಿಂದಿದ್ದ ಶಂಕಿತ ಉಮರ್ ಉನ್ ನಬಿ ಜತೆ ಸಂಚು ರೂಪಿಸಿದ್ದ ಎನ್ನಲಾದ ಕಾಶ್ಮೀರಿ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.
ನವೆಂಬರ್ 10 ರಂದು ನಡೆದ ದಾಳಿಯಲ್ಲಿ ಬಳಸಲಾದ ಹುಂಡೈ i20 ಕಾರನ್ನು ನೋಂದಾಯಿಸಲಾಗಿದ್ದ ಅಮೀರ್ ರಶೀದ್ ಅಲಿಯನ್ನು NIA ಬಂಧಿಸಿದೆ. ಅಲ್ಲದೆ, ಅಲಿಯನ್ನು ಕೇಂದ್ರ ಸಂಸ್ಥೆ ದೆಹಲಿಯಲ್ಲಿ ಸೆರೆಹಿಡಿದಿವೆ.
ಈ ಆರೋಪಿ ಬಗ್ಗೆ ತಿಳಿಸಿರುವ NIA, ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್‌ನ ಸಂಬೂರಾ ನಿವಾಸಿಯಾಗಿದ್ದಾನೆ. ದಾಳಿಯ ಆತ್ಮಹತ್ಯಾ ಬಾಂಬರ್ ಎಂದು ಹೇಳಲಾದ ಉಮರ್ ಉನ್ ನಬಿ ಜೊತೆ ಸೇರಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ ಎಂದು ತನಿಖಾ ಸಂಸ್ಥೆಯ ಹೇಳಿಕೆ ತಿಳಿಸಿದೆ.
 ಈ ಆರೋಪಿಯು ಅಪರಾಧಕ್ಕೆ ಬಳಸಲಾದ ಹುಂಡೈ ಐ20 ಕಾರನ್ನು ಖರೀದಿಸಲು ಅಮೀರ್ ರಶೀದ್ ಅಲಿ ದೆಹಲಿಗೆ ಬಂದಿದ್ದನು ಎನ್ನಲಾಗಿದೆ. ಅಲ್ಲದೆ, ನವೆಂಬರ್ 10 ರಂದು ಸಂಜೆ ಜನನಿಬಿಡ ಪ್ರದೇಶದಲ್ಲಿ ಸ್ಫೋಟಕಗಳು ಸ್ಫೋಟಗೊಳ್ಳುವ ಮೊದಲು, ಜನದಟ್ಟಣೆಯ ದೆಹಲಿ ಪ್ರದೇಶದ ಪ್ರಮುಖ ಛೇದಕಗಳಲ್ಲಿ ಹಲವಾರು ಬಾರಿ ನಿಲ್ಲಿಸಿದ ಕಾರನ್ನು ಸಿಸಿಟಿವಿಗಳು ಸೆರೆಹಿಡಿದಿವೆ.
ಎನ್‌ಐಎ ವಿಧಿವಿಜ್ಞಾನ ತನಿಖೆಯು ಮೃತ ಕಾರಿನ ಚಾಲಕನನ್ನು ಪುಲ್ವಾಮಾ ಜಿಲ್ಲೆಯ ನಿವಾಸಿ ಉಮರ್ ಉನ್ ನಬಿ ಎಂದು ಗುರುತಿಸಿದ್ದು, ಇವನು ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದೆ.
ಶನಿವಾರ ಮುಂಜಾನೆ, ದೆಹಲಿ ಪೊಲೀಸರು ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಹರಿಯಾಣದ ಅಲ್ ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಬಾಂಬ್ ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಬಯಲು ಮಾಡಲು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಹುಡುಕುತ್ತಿರುವುದಾಗಿ NIA ಹೇಳಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net