ದೆಹಲಿ ವಾಯುಮಾಲಿನ್ಯ: ಪೊಲೀಸರಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಪ್ರತಿಭಟನಾಕಾರರು, 15 ಜನರ ಬಂಧನ Air pollution

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ದೆಹಲಿಯ ವಿಷಕಾರಿ ಗಾಳಿಯ (Air pollution) ಕುರಿತು ಅಸಮಾಧಾನಗೊಂಡ ರಾಜಧಾನಿಯ ಅನೇಕ ಜನರು ಇಂಡಿಯಾ ಗೇಟ್‌ ಮುಂಭಾಗ ಪ್ರತಿಭಟನೆ ನಡೆಸಿದ್ದು, ಈ ಘಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 15 ಜನರನ್ನು ಪೊಲೀಸರು ಸೋಮವಾರ (ನ.23) ಬಂಧಿಸಿದ್ದಾರೆ.
ಭಾನುವಾರ ಸಂಜೆ ನಡೆದ ಹೋರಾಟದ ವೇಳೆ ಪ್ರತಿಭಟನಾಕಾರರು ರಸ್ತೆಯನ್ನು ಬಂದ್ ಮಾಡಿ ಜನರಿಗೆ ತೊಂದರೆಯುಂಟು ಮಾಡಿದ್ದಾರೆ. ಈ ವೇಳೆ ಅದನ್ನು ತಡೆಯಲು ಹೋದ ಪೊಲೀಸ್ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದು, ಇದು ಉದ್ವಿಗ್ನತೆಗೆ ಕಾರಣವಾಗಿದೆ. ಇನ್ನು ಮೂರರಿಂದ ನಾಲ್ಕು ಅಧಿಕಾರಿಗಳ ಕಣ್ಣು ಮತ್ತು ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಪಿಟಿಐಗೆ ದೃಢಪಡಿಸಿದ್ದಾರೆ.
ರಾಜಧಾನಿಯ ಕಳಪೆ ಗಾಳಿಯ ಗುಣಮಟ್ಟದ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲು ಸೇರಿದ್ದ ಪ್ರತಿಭಟನಾಕಾರರ ಗುಂಪು, ಸಿ-ಹೆಕ್ಸಾಗನ್ ಬಳಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ಹೋದ ನಂತರ ಘರ್ಷಣೆ ಭುಗಿಲೆದ್ದಿತು.
ಈ ಸಂಘರ್ಷದ ವೇಳೆ ಆಂಬ್ಯುಲೆನ್ಸ್‌ಗಳಿಗೂ ಸಹ ದಾರಿ ಬಿಡದೆ ಹೋರಾಟಗಾರರು ಮೊಂಡುತನ ಪ್ರದರ್ಶಿಸಿದ್ದಾರೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಪರಿಸ್ಥಿತಿ ಹದಗೆಡುತ್ತಿರುವುದನ್ನು ಅರಿತ ಪೊಲೀಸರು ಹಿಂದೆ ಸರಿಯುವಂತೆ ಹೇಳಿದರೂ ಅದಕ್ಕೆ ಕಿವಿಗೊಡದ ಪ್ರತಿಭಟನಾಕಾರರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು, ರಸ್ತೆಯನ್ನು ಆಕ್ರಮಿಸಿಕೊಂಡು ಧರಣಿ ನಡೆಸಿದ್ದಾರೆ ಎನ್ನಲಾಗಿದೆ.
ಹಿಡ್ಮಾ ಒಬ್ಬ ಬುಡಕಟ್ಟು ಜನಾಂಗದ ವ್ಯಕ್ತಿಯಾಗಿದ್ದು, ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ. ಜನರು ಈ ವಿಧಾನವನ್ನು ಒಪ್ಪುವುದಿಲ್ಲ ಮತ್ತು ಇದು ತಪ್ಪು. ತಮ್ಮ ಹಕ್ಕುಗಳನ್ನು ರಕ್ಷಿಸುವ ಜನರ ಮೇಲೆ ಅಂತಹ ದಮನವನ್ನು ಹೇರಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ನಿನ್ನೆಯ ದೆಹಲಿಯ ಪ್ರತಿಭಟನೆಯನ್ನು ನೋಡಿದಾಗ ಮಾಲಿನ್ಯದ ಸೋಗಿನಲ್ಲಿ ಮಾವೋವಾದಿಗಳ ಪೋಸ್ಟರ್‌ಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಅವರ ತುಟಿಗಳ ಮೇಲೆ ರೆಡ್ ಸೆಲ್ಯೂಟ್ ಘೋಷಣೆಗಳು. ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ನಟಿಸುತ್ತಿರುವ ಜಿಹಾದಿಗಳು ಮತ್ತು ನಕ್ಸಲರ ಹೊಸ ಮುಖ ಪರಿಚಯವಾಯಿತು ಎಂದು ದೆಹಲಿ ಅಭಿವೃದ್ಧಿ ಸಚಿವ ಕಪಿಲ್ ಮಿಶ್ರಾ ಸೋಮವಾರ ತಮ್ಮ ಎಕ್ಸ್​ ಖಾತೆಯಲ್ಲಿ ಟ್ವೀಟ್​ ಮಾಡಿದ್ದಾರೆ.

ಹಿನ್ನಲೆ

ಕಳೆದ ಒಂದು ವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಅಪಾಯಕಾರಿ ಮಟ್ಟವನ್ನು ತಡೆಯಲು ದೆಹಲಿ ಸರ್ಕಾರ ಕೈಗೊಂಡಿದ್ದ ನೀರು ಸಿಂಪಡಣೆ, ಮೋಡ ಬಿತ್ತನೆ ಮುಂತಾದವುಗಳನ್ನು ವಿರೋಧಿಸಿ ದೆಹಲಿ ಸಮನ್ವಯ ಸಮಿತಿಯು ಶುದ್ಧ ಗಾಳಿಗಾಗಿ ಪ್ರತಿಭಟನೆಯನ್ನು ನಡೆಸಿತ್ತು.
ರೇಖಾ ಗುಪ್ತಾ ನೇತೃತ್ವದ ದೆಹಲಿ ಸರ್ಕಾರವು ಬಿಕ್ಕಟ್ಟನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಇವರು ಗಣಿಗಾರಿಕೆ ಯೋಜನೆಗಳು, ಅರಣ್ಯ ತೆರವುಗೊಳಿಸುವಿಕೆ ಮತ್ತು ದುರ್ಬಲ ಪ್ರದೇಶಗಳಲ್ಲಿ ತ್ವರಿತ ಮೂಲಸೌಕರ್ಯ ವಿಸ್ತರಣೆ ಸೇರಿದಂತೆ ಪ್ರಸ್ತುತ ಅಭಿವೃದ್ಧಿ ಮಾದರಿಗಳು ದೇಶಾದ್ಯಂತ ಮಾಲಿನ್ಯವನ್ನು ಹರಡುತ್ತಿದೆ. ಇದು ಜನರ ಆರೋಗ್ಯ ಮತ್ತು ಹವಮಾನವನ್ನು ಹದಗೆಡಿಸುತ್ತಿದೆ ಎಂದು ಪ್ರತಿಭಟನಾಕಾರರು ವಾದ ಮಂಡಿಸಿದ್ದಾರೆ.
ಜನರು ಧ್ವನಿ ಎತ್ತಿದಾಗ ಸರ್ಕಾರವು ದಮನದಿಂದ ಪ್ರತಿಕ್ರಿಯಿಸುತ್ತದೆ. ಇದು ಕಾರ್ಯಕರ್ತರನ್ನು ಬಂಧಿಸುವುದು, ನಿರ್ಬಂಧಗಳನ್ನು ಹೇರುವುದು ಮತ್ತು ಭಿನ್ನಾಭಿಪ್ರಾಯವನ್ನು ಉಂಟು ಮಾಡುತ್ತದೆ ಎಂದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net