ನವಜಾತ ಶಿಶುವಿನ ತಾಯಿ ದೀಕ್ಷಾ ಅವರು ಈ ಸಂಭ್ರಮದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ, ಈಗ ನಮ್ಮ ಸಂಸಾರ ಪೂರ್ಣಗೊಂಡಿದೆ" ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ. ಮಗುವನ್ನು ಕಾರಿಗೆ ಹತ್ತಿಸುವಾಗ ಇಡೀ ಕುಟುಂಬ ಕುಣಿದು ಕುಪ್ಪಳಿಸಿ ಸಂಭ್ರಮಿಸಿದೆ. ಈ ವಿಡಿಯೋದಲ್ಲಿ "ನಮ್ಮ ಲಕ್ಷ್ಮಿ ಬಂದಿದ್ದಾಳೆ" ಎಂಬ ಬರಹವಿದ್ದು, ಹೆಣ್ಣು ಮಗುವನ್ನು ಸಮೃದ್ಧಿ ಮತ್ತು ಸಂತೋಷದ ಸಂಕೇತವಾಗಿ ಆ ಕುಟುಂಬ ಬಿಂಬಿಸಿದೆ.