ಕೈಯಲ್ಲಿ ಪದವಿ ಮತ್ತು ಜೇಬಿನಲ್ಲಿ ಆರ್‌ಡಿಎಕ್ಸ್...ವೈಟ್ ಕಾಲರ್ ಭಯೋತ್ಪಾದನೆ ಬಗ್ಗೆ ರಾಜನಾಥ್ ಸಿಂಗ್ ಆತಂಕ | Rajnath Singh

Rajnath Singh | ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
Rajnath Singh | ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
Published on
Rajnath Singh: ದೇಶದಲ್ಲಿ ವೈಟ್ ಕಾಲರ್ ಭಯೋತ್ಪಾದನೆಯ ಆತಂಕಕಾರಿ ಬೆಳವಣಿಗೆ ಬಗ್ಗೆ ಶುಕ್ರವಾರ (ಜ.2) ಮಾತನಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೌಲ್ಯಗಳಿಲ್ಲದ ಉನ್ನತ ಶಿಕ್ಷಣ ಸಮಾಜಕ್ಕೆ ಅಪಾಯಕಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ.
ಭೂಪಾಲ್ ನೋಬಲ್ಸ್ ವಿಶ್ವವಿದ್ಯಾಲಯದ 104 ನೇ ಸಂಸ್ಥಾಪನಾ ದಿನದಂದು ಮಾತನಾಡಿದ ಸಚಿವ ಸಿಂಗ್, ಇತ್ತೀಚೆಗೆ ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರ್ ಬಾಂಬ್ ಸ್ಫೋಟವನ್ನು ಉಲ್ಲೇಖಿಸಿದ್ದು, ದಾಳಿಯಲ್ಲಿ ಪಾಲ್ಗೊಂಡವರು ವೈದ್ಯರಾಗಿದ್ದು, ಶಿಕ್ಷಣ ಮಾತ್ರ ನೈತಿಕ ನಡವಳಿಕೆಯನ್ನು ಖಾತರಿಪಡಿಸುವುದಿಲ್ಲ ಎಂಬುದಕ್ಕೆ ಇದು ನೈಜ ಉದಾಹರಣೆಯಾಗಿದೆ ಎಂದು ಹೇಳಿದರು.
ಇಂದು ದೇಶದಲ್ಲಿ ವೈಟ್ ಕಾಲರ್ ಭಯೋತ್ಪಾದನೆಯ ಆತಂಕಕಾರಿ ಪ್ರವೃತ್ತಿ ಹೊರಹೊಮ್ಮುತ್ತಿದೆ. ಉನ್ನತ ಶಿಕ್ಷಣ ಪಡೆದ ಕೆಲ ಜನರು ಸಮಾಜ ಮತ್ತು ದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ದೆಹಲಿ ಬಾಂಬ್ ಸ್ಫೋಟದ ಅಪರಾಧಿಗಳು ವೈದ್ಯರು, ಕೈಯಲ್ಲಿ ಪದವಿ ಮತ್ತು ಜೇಬಿನಲ್ಲಿ ಆರ್‌ಡಿಎಕ್ಸ್ ಹೊಂದಿದ್ದವರು. ಇದು ಜ್ಞಾನವು ಮೌಲ್ಯಗಳು ಮತ್ತು ಚಾರಿತ್ರ್ಯದೊಂದಿಗೆ ಇರಬೇಕಾದ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದರು.
ಶಿಕ್ಷಣದ ಪ್ರಮುಖ ಉದ್ದೇಶ ವೃತ್ತಿಪರ ಯಶಸ್ಸು ಅಷ್ಟೆ ಅಲ್ಲ ನೈತಿಕತೆ, ನೀತಿಶಾಸ್ತ್ರ ಮತ್ತು ಮಾನವ ಚಾರಿತ್ರ್ಯದ ಬೆಳವಣಿಗೆಯೂ ಆಗಿದೆ. ಈ ಉದ್ದೇಶವನ್ನು ಪೂರೈಸಲು ಸಾಧ್ಯವಾಗದ ಯಾವುದೇ ಶಿಕ್ಷಣ ವ್ಯವಸ್ಥೆಯು ನಮ್ರತೆ, ಜ್ಞಾನದ ಜೊತೆಗೆ ಧರ್ಮ (ಸದಾಚಾರ) ನೀಡುವುದಿಲ್ಲ. ಭಯೋತ್ಪಾದಕರು ಅನಕ್ಷರಸ್ಥರಲ್ಲ ಮತ್ತು ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಹೊಂದಿರಬಹುದು, ಆದರೆ, ಬುದ್ಧಿವಂತಿಕೆ ಮತ್ತು ಮೌಲ್ಯಗಳನ್ನು ಹೊಂದಿರುವುದಿಲ್ಲ ಎಂದು ಹೇಳಿದರು.
ನಾನು ಧರ್ಮದ ಬಗ್ಗೆ ಮಾತನಾಡುವಾಗ, ಅದನ್ನು ದೇವಸ್ಥಾನ, ಮಸೀದಿ ಅಥವಾ ಚರ್ಚ್‌ಗೆ ಪ್ರಾರ್ಥನೆಗಾಗಿ ಹೋಗುವುದರೊಂದಿಗೆ ಮಾತ್ರ ಹೋಲಿಸಬಾರದು. ಧರ್ಮವು ಕರ್ತವ್ಯ ಪ್ರಜ್ಞೆಯಾಗಿದ್ದು, ಧರ್ಮ ಮತ್ತು ನೈತಿಕತೆ ಇಲ್ಲದ ಶಿಕ್ಷಣವು ಸಮಾಜಕ್ಕೆ ಉಪಯೋಗವಾಗುವುದಿಲ್ಲ, ಕೆಲವೊಮ್ಮೆ ಅದು ಮಾರಕವೂ ಆಗಬಹುದು. ಅದಕ್ಕಾಗಿಯೇ ವಿದ್ಯಾವಂತ ಜನರು ಕೆಲವೊಮ್ಮೆ ಅಪರಾಧಗಳಲ್ಲಿ ಭಾಗಿಯಾಗಿರುವುದು ಕಂಡುಬರುತ್ತಿದೆ ಎಂದರು.
ಡಾ. ಉಮರ್-ಉನ್-ನಬಿ ಚಲಾಯಿಸುತ್ತಿದ್ದ ಸ್ಫೋಟಕಗಳಿಂದ ತುಂಬಿದ i20 ಕಾರು ಸ್ಫೋಟಗೊಂಡಿದ್ದು , 15 ಜನರು ಸಾವನ್ನಪ್ಪಿದರು. ನಂತರ ಅಧಿಕಾರಿಗಳು ವೈಟ್-ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಅನ್ನು ಬಹಿರಂಗಪಡಿಸಿದರು, ಇದು ಮೂವರು ವೈದ್ಯರನ್ನು ಮುಜಮ್ಮಿಲ್ ಗನೈ, ಅದೀಲ್ ರಾಥರ್ ಮತ್ತು ಶಹೀನಾ ಸಯೀದ್ ಬಂಧಿಸಲು ಕಾರಣವಾಯಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net