ದೀಪಿಕಾ ಪಡುಕೋಣೆ ಅಂಗರಕ್ಷಕನ ವಾರ್ಷಿಕ ಸಂಬಳ ಎಷ್ಟು ಗೊತ್ತೇ? Deepika Padukone

 Deepika Padukone
Deepika Padukone
Published on
ಮುಂಬೈ: ( Deepika Padukone) ದೀಪಿಕಾ ಪಡುಕೋಣೆ ಅವರಿಗೆ ನೆರಳಿನಂತೆ ಸದಾ ಜೊತೆಗಿರುವ ಜಲಾವುದ್ದೀನ್ ಶೇಖ್ ( jalaluddin shaikh) ಅವರು ಕೇವಲ ಒಬ್ಬ ಅಂಗರಕ್ಷಕ ಮಾತ್ರವಲ್ಲ, ದೀಪಿಕಾ ಅವರಿಗೆ ಕುಟುಂಬದ ಸದಸ್ಯರಂತಿದ್ದಾರೆ. ಇವರ ಅಂಗರಕ್ಷಕನ ವಾರ್ಷಿಕ ಆದಾಯವು ದೊಡ್ಡ ಕಂಪನಿಗಳ ಸಿಇಒಗಳ ಸಂಬಳಕ್ಕೆ ಸಮನಾಗಿದೆ ಎಂಬ ಸುದ್ದಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಜನವರಿ 5 ರಂದು ಬಾಲಿವುಡ್ ನಾಯಕಿ ದೀಪಿಕಾ ಪಡುಕೋಣೆ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ, ಅವರ ಅಂಗರಕ್ಷಕ ಜಲಾಲುದ್ದೀನ್ ಶೇಖ್ ದೀಪಿಕಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಅವರ ಪೋಸ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.
"ನಿಮಗೆ ಸಂತೋಷದ ದಿನಗಳು ಬೇಕು. ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸಲಿ" ಎಂದು ಬರೆದುಕೊಂಡು ದೀಪಿಕಾ ಜೊತೆ ಇರುವ ಫೋಟೋವನ್ನು ಜಲಾಲುದ್ದೀನ್ ಶೇಖ್ ಹಂಚಿಕೊಂಡಿದ್ದಾರೆ. ಈ ಫೋಸ್ಟ್​​ ವೈರಲ್​​ ಆಗುತ್ತಿದ್ದಂತೆ ಜಲಾಲುದ್ದೀನ್ ಶೇಖ್ ಅವರಿಗೆ ದೀಪಿಕಾ ಎಷ್ಟು ಸಂಬಳ ನೀಡುತ್ತಾರೆ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ವರದಿಗಳ ಪ್ರಕಾರ, 2024-2025ರ ಹೊತ್ತಿಗೆ, ಜಲಾಲುದ್ದೀನ್ ವರ್ಷಕ್ಕೆ ಸುಮಾರು 1.2 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ. ಅದಕ್ಕೂ ಮೊದಲು, ಅವರು ವರ್ಷಕ್ಕೆ ಕೇವಲ 80 ಲಕ್ಷ ರೂ. ಮಾತ್ರ ಪಡೆಯುತ್ತಿದ್ದರು.. ಕಳೆದ ಎರಡು ವರ್ಷಗಳಿಂದ ಅವರ ವಾರ್ಷಿಕ ಸಂಬಳ ಹೆಚ್ಚುತ್ತಿದೆ. ಅವರು ದೀರ್ಘಕಾಲದಿಂದ ದೀಪಿಕಾ ಅವರ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ದೀಪಿಕಾ ಜಲಾಲ್ ಅವರನ್ನು ಸಹೋದರನಂತೆ ಭಾವಿಸುತ್ತಾರೆ ಮತ್ತು ಪ್ರತಿ ರಕ್ಷಾ ಬಂಧನದಂದು ರಾಖಿ ಕಟ್ಟುತ್ತಾರೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಇಟಲಿ ವಿವಾಹದ ಸಂದರ್ಭದಲ್ಲಿ ಇಡೀ ಭದ್ರತಾ ವ್ಯವಸ್ಥೆಯ ಉಸ್ತುವಾರಿಯನ್ನು ಜಲಾಲ್ ಅವರೇ ವಹಿಸಿದ್ದರು ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ದೀಪಿಕಾ ಎಲ್ಲೇ ಹೋದರೂ (ಶೂಟಿಂಗ್ ಅಥವಾ ಪ್ರವಾಸ) ಜಲಾಲ್ ಅವರ ಭದ್ರತೆ ಇದ್ದೇ ಇರುತ್ತದೆ.
ದೀಪಿಕಾ ಆಕ್ಷನ್ ಕಿಂಗ್ ಶಾರುಖ್ ಖಾನ್ ಅಭಿನಯದ ಕಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ, ಸುಹಾನಾ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲೀ ಕಾಂಬೊದಲ್ಲಿ ಮುಂಬರುವ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net