ಅರವಿಂದ್ ಕೇಜ್ರಿವಾಲ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ: 7 ಕೋಟಿ ರೂ. ಹಣಕ್ಕೆ ಡಿಮ್ಯಾಂಡ್! Arvind Kejriwal

Aam Aadmi Party chief Arvind Kejriwal has received a death threat from the Lawrence Bishnoi gang.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ ಸಂದೇಶ ಬಂದಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್.
Published on: 

ನವದೆಹಲಿ: ಇಷ್ಟು ದಿನ ಸಿನಿಮಾ ನಟರಿಗೆ, ಅದರಲ್ಲೂ ನಟ ಸಲ್ಮಾನ್​ ಖಾನ್​ ಆಪ್ತರಿಗೆ ಜೀವ ಬೆದರಿಕೆ ಹಾಕುತ್ತಾ, ಅವರ ಮೇಲೆ ಶೂಟೌಟ್​ ಮಾಡಿಸುತ್ತಾ ಸುದ್ದಿಯಲ್ಲಿದ್ದ ಬಿಷ್ಣೋಯ್​ ಗ್ಯಾಂಗ್​, ಈಗ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಜೀಬ ಬೆದರಿಕೆ ಹಾಕಿದೆ ಎಂದು ತಿಳಿದುಬಂದಿದೆ.

ಬಾಲಿವುಡ್​ ನಟ ಟೈಗರ್ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆಸಿದ ಬೆನ್ನಲೇ, ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ಗೆ ಬಿಷ್ಣೋಯ್​ ಗ್ಯಾಂಗ್​ನಿಂದ ಜೀವ ಬೆದರಿಕೆ ಬಂದಿದ್ದು, 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಗಿ ವರದಿಯಾಗಿದೆ.

ಶಾಸಕನ ಫೋನ್​ಗೆ ಬಂದ ಸಂದೇಶ!

ವರದಿ ಪ್ರಕಾರ, ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​​ ವತಿಯಿಂದ ತಿಲಕ್​ ನಗರ ಶಾಸಕ ಜರ್ನೈಲ್ ಸಿಂಗ್ (Jarnail Singh) ಅವರ ಮೊಬೈಲ್​ ಫೋನ್​ಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಹಾಗೂ ಅವರ ಪುತ್ರಿಯನ್ನು ಕೊಲೆ ಮಾಡುವುದಾಗಿ ತಿಳಿಸಿ, 7 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ.

ಈ ಬೆದರಿಕೆ ಸಂದೇಶವನ್ನು ನೋಡಿ ಹೆದರಿದ ಜರ್ನೈಲ್ ಸಿಂಗ್ ಕೂಡಲೇ ಮೊಹಾಲಿಯ ಎಸ್​ಎಸ್​ಪಿ ಬಳಿ ದೂರನ್ನು ದಾಖಲಿಸಿದ್ದಾಗಿ ತಿಳಿದುಬಂದಿದೆ. ಸದ್ಯ ದೂರನ್ನು ದಾಖಲಿಸಿಕೊಂಡಿರುವ ಸೈಬರ್​ ಪೊಲೀಸರು, ಈ ಬೆದರಿಕೆಯ ಸತ್ಯಾಸತ್ಯೆಯನ್ನು ಪರಿಶೀಲಿಸುತ್ತಿದ್ದಾಗಿ ಇನ್ಸ್​ಪೆಕ್ಟರ್​ ಸುನೀಲ್​ ಕುಮಾರ್ ತಿಳಿಸಿದ್ದಾರೆ.

Also Read
VAO ಟಾಪರ್ ಶಂಕರ್​ ಬನ್ನೂರ ಕಳ್ಳಾಟಕ್ಕೆ ಬಿಗ್ ಟ್ವಿಸ್ಟ್: 'ಅವನು ಪರೀಕ್ಷೆಗೆ ಹಾಜರಿರಲಿಲ್ಲ' ಎಂದ ಯುವಕ; ಹಾವೇರಿ ಎಸ್ಪಿ ಕೊಟ್ಟ ಸ್ಪಷ್ಟನೆ ಏನು? Shankar Bannur
Aam Aadmi Party chief Arvind Kejriwal has received a death threat from the Lawrence Bishnoi gang.

ತನಿಖೆ ಮುಂದುವರಿದಿದೆ!

ಇನ್ನು ಈ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡ ಇನ್ಸ್​ಪೆಕ್ಟರ್​ ಸುನೀಲ್​ ಕುಮಾರ್, ಎಂಎಲ್​ಎ ಜರ್ನೈಲ್ ಸಿಂಗ್ ನೀಡಿದ ದೂರನ್ನು ಆಧರಿಸಿ, ಸೈಬರ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಸಂದೇಶ ಕಳುಹಿಸಿದ ಮೊಬೈಲ್​ ಸಂಖ್ಯೆ ವಿವರ, ಡೇಟಾ, ಇಂರ್ಟನೆಟ್​ ಬಳಕೆ, ಲೊಕೇಶನ್ ಮೊದಲಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾಗಿ ತಿಳಿಸಿದ್ದಾರೆ.

ಚುನಾವಣೆ ಬೆನ್ನಲ್ಲೆ ಬೆದರಿಕೆ!

ಇನ್ನು ಕೆಲವೇ ತಿಂಗಳುಗಳಲ್ಲಿ ಪಂಜಾಬ್​ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಮ್​ ಆದ್ಮಿ ಪಕ್ಷ ತನ್ನ ಅಧಿಕಾರ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ ಭರದಿಂದ ಪ್ರಚಾರ, ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಅವರ ಜೀವಕ್ಕೆ ಅಪಾಯ ಸಂಭವಿಸುವ ಮುನ್ಸೂಚನೆ ದೊರೆತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ, (ಏಜೆನ್ಸೀಸ್​).