ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಧೀರ್ಘ ನಾಲ್ಕು ಪುಟಗಳ ಡೆತ್ನೋಟ್ ಬರೆದು, ವಿಡಿಯೋ ಮಾಡಿರುವ ದಂಪತಿ, ಆದಿತ್ಯ ನಮ್ಮ ಜಗತ್ತು. ಅವನಿಲ್ಲದ ಜೀವನ ನಮಗೆ ಅರ್ಥಹೀನವೆನಿಸುತ್ತದೆ. ನಾವು ದೇವರ ಬಳಿಗೆ ಹೋಗುತ್ತಿದ್ದೇವೆ. ನಮ್ಮ ಮಗನಿಲ್ಲದ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ನಮ್ಮ ಸಾವಿನ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ. ದಯವಿಟ್ಟು ನಮಗೆ ಬರಬೇಕಾದ ಹಣ ನನ್ನ ಅಣ್ಣನಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಬರೆದಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).