ನಕಲಿ ದಾಖಲೆಗಳನ್ನು ಸೃಷ್ಟಿಸಿದ ಪ್ರಕರಣ ಹಾಗೂ ಇದರಲ್ಲಿ ಬಿಲ್ಡರ್‌ಗಳು ಮತ್ತು ಸರ್ಕಾರಿ ಅಧಿಕಾರಿಗಳ ಪಾತ್ರದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದ ವೋರಾ, ತಮ್ಮ ದೂರುಗಳ ಮೇಲೆ ಪುರಸಭೆ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು. ಈ ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದಂತೆ 2015 ರಲ್ಲೇ ಎಫ್‌ಐಆರ್ ದಾಖಲಾಗಿದ್ದರೂ, ಈ ಪ್ರಕರಣದ ಸಿಐಡಿ ವರದಿಯನ್ನು ಈ ವರ್ಷವಷ್ಟೇ ಸಲ್ಲಿಸಲಾಗಿದೆ ಎನ್ನುತ್ತಾ, ಈ ಸುದೀರ್ಘ ವಿಳಂಬವನ್ನು ಪ್ರಶ್ನಿಸಿ, ಇದರ ಹಿಂದೆ ರಾಜಕೀಯ ಒತ್ತಡ ಇರಬಹುದು ಎಂದು ಆರೋಪಿಸಿದರು.