

ಮುಜಫರ್ ನಗರ: ಉತ್ತರ ಪ್ರದೇಶದ ಮೋರ್ನಾ ಗ್ರಾಮದಲ್ಲಿ ನಡೆದ60 ವರ್ಷದ ರೈತ ರಾಮಪ್ರಸಾದ್ ಅವರ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಕೇವಲ ಎರಡೇ ಗಂಟೆಗಳಲ್ಲಿಯಶಸ್ವಿಯಾಗಿದ್ದಾರೆ. ಈ ಭೀಕರ ಕೊಲೆಯನ್ನು ಬೇರೆ ಯಾರೋ ಅಲ್ಲ, ಸ್ವತಃ ರಾಮಪ್ರಸಾದ್ ಅವರ ಇಬ್ಬರು ಪುತ್ರಿಯರೇ(Daughter Kills Father ) ಮಾಡಿದ್ದಾರೆ ಎಂಬ ಆಘಾತಕಾರಿ ಸತ್ಯ ಹೊರಬಂದಿದೆ.
ಸೋಮವಾರ ಬೆಳಿಗ್ಗೆರಾಮಪ್ರಸಾದ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಹಂತಕರು ಅವರ ಗಂಟಲನ್ನು ಸೀಳಿ,ಹೊಟ್ಟೆಗೆ ಹಲವು ಬಾರಿ ಇರಿದು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಎಸ್‌ಪಿಆದಿತ್ಯ ಬನ್ಸಾಲ್ ನೇತೃತ್ವದ ತಂಡ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದಾಗ, ಮೃತರ ಇಬ್ಬರು ಪುತ್ರಿಯರಾದಕೋಮಲ್ (32) ಮತ್ತು 16 ವರ್ಷದ ಅಪ್ರಾಪ್ತ ಮಗಳ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಪೊಲೀಸರುಬಿಗಿಯಾದ ವಿಚಾರಣೆ ನಡೆಸಿದಾಗ ಇಬ್ಬರೂ ಸತ್ಯ ಒಪ್ಪಿಕೊಂಡಿದ್ದಾರೆ.
ಕೊಲೆಗೆ ಕಾರಣವೇನು?
ಆರೋಪಿ ಸಹೋದರಿಯರುಪೊಲೀಸರ ಮುಂದೆ ನೀಡಿರುವ ಹೇಳಿಕೆಗಳು ಮನಕಲಕುವಂತಿವೆ. ತಂದೆ ರಾಮಪ್ರಸಾದ್ ಅವರು ತಮ್ಮ ಹೆಣ್ಣುಮಕ್ಕಳಿಗೆಮದುವೆಯಾಗದಿರುವ ಬಗ್ಗೆ ಮತ್ತು ಮನೆಯಲ್ಲಿ ಸುಮ್ಮನೆ ಕುಳಿತಿರುವುದರ ಬಗ್ಗೆ ದಿನನಿತ್ಯ ಹೀಯಾಳಿಸುತ್ತಿದ್ದರು.ಗಂಡುಮಕ್ಕಳು ಮತ್ತು ಹೆಣ್ಣು ಮಕ್ಕಳ ನಡುವೆ ತಂದೆ ತಾರತಮ್ಯ ಮಾಡುತ್ತಿದ್ದರು ಹಾಗೂ ಸಮಾಜದಲ್ಲಿ ನಿಮ್ಮಿಂದಅಪಖ್ಯಾತಿ ಬರುತ್ತಿದೆ ಎಂದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.
ಈ ಅವಮಾನಗಳನ್ನುಸಹಿಸಲಾರದೆ ಇಬ್ಬರೂ ಸಹೋದರಿಯರು ಎರಡು ದಿನಗಳ ಹಿಂದೆಯೇ ಕೊಲೆಗೆ ಸ್ಕೆಚ್ ಹಾಕಿದ್ದರು. ಭಾನುವಾರ ರಾತ್ರಿಮತ್ತೆ ಜಗಳ ನಡೆದಾಗ, ಆವೇಶದಲ್ಲಿ ಚಾಕುವಿನಿಂದ ತಂದೆಯನ್ನೇ ಮುಗಿಸಿದ್ದಾರೆ.
ಸಾಕ್ಷ್ಯನಾಶಕ್ಕೆ ಯತ್ನ
ಕೊಲೆ ಮಾಡಿದನಂತರ ರಕ್ತಸಿಕ್ತ ಬಟ್ಟೆ ಮತ್ತು ಚಾಕುವನ್ನು ಮೂಟೆಯಲ್ಲಿ ಕಟ್ಟಿ ಹುಲ್ಲಿನ ಬಣವೆಯಲ್ಲಿ ಬಚ್ಚಿಟ್ಟಿದ್ದರು.ಪೊಲೀಸರು ಈ ಎರಡೂ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಹಿರಿಯ ಮಗಳು ಕೋಮಲ್ ಜೈಲು ಪಾಲಾಗಿದ್ದರೆ,ಅಪ್ರಾಪ್ತ ಮಗಳನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ,(ಏಜೆನ್ಸೀಸ್).