ಆರೋಪಿಯು ನ. 06ರ ಸಂಜೆ ಗೋಸಲ ಜಂಕ್ಷನ್‌ನಲ್ಲಿರುವ ಪೆಟ್ರೋಲ್ ಬಂಕ್‌ನಿಂದ ತನ್ನ ಕಾರಿಗೆಂದು ಪೆಟ್ರೋಲ್ ಖರೀದಿಸಿದ್ದಳು. ಮರುದಿನ ಬೆಳಿಗ್ಗೆ ಆಕೆಯ ಪತಿ ಮತ್ತು ಸೋದರಳಿಯ ಕೆಲಸಕ್ಕೆ ಹೋದ ಬಳಿಕ ತನ್ನ ಅತ್ತೆ ಮತ್ತು ಮಕ್ಕಳನ್ನು ಕಳ್ಳ-ಪೊಲೀಸ್ ಆಟವಾಡೋಣ ಎಂದು ಹೇಳಿದ್ದಾಳೆ. ಈ ವೇಳೆ ವೃದ್ಧ ಮಹಿಳೆಯ ಕಣ್ಣಿಗೆ ಬಟ್ಟೆ ಕಟ್ಟಿ, ಬಳಿಕ ಆಕೆಯನ್ನು ಕುರ್ಚಿಗೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. 8 ವರ್ಷದ ಮೊಮ್ಮಗಳು ಶ್ರೀನಯನ ತನ್ನ ಅಜ್ಜಿಯನ್ನು ರಕ್ಷಿಸಲು ಪ್ರಯತ್ನ ಪಟ್ಟಾಗ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).