ಭಾರತೀಯ ಪೌರತ್ವ ಕಾಯ್ದೆಯ ಪ್ರಕಾರ, ಯಾವುದೇ ವಿದೇಶಿ ಪ್ರಜೆಯು ಸಿಂಧುವಾದ ಪ್ರವಾಸ ದಾಖಲೆಗಳು (ವೀಸಾ, ಪಾಸ್ಪೋರ್ಟ್) ಇಲ್ಲದೆ ಭಾರತದ ಗಡಿ ಪ್ರವೇಶಿಸಿದರೆ ಅಥವಾ ಸಿಂಧುವಾದ ದಾಖಲೆಗಳೊಂದಿಗೆ ಬಂದು ಅನುಮತಿಸಲಾದ ಅವಧಿ ಮುಗಿದ ನಂತರವೂ ದೇಶದಲ್ಲಿ ನೆಲೆಸಿದ್ದರೆ ಅವರನ್ನು ಅಕ್ರಮ ವಲಸಿಗ ಎಂದು ಪರಿಗಣಿಸಲಾಗುತ್ತದೆ. ಕಳೆದ ಏಪ್ರಿಲ್ನಲ್ಲಿ ನಡೆದ ಭೀಕರ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಅಕ್ರಮ ನುಸುಳುಕೋರರನ್ನು ದೇಶದಿಂದ ಓಡಿಸುವುದನ್ನೇ ತನ್ನ ಮುಖ್ಯ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು.