ಈ ರಾಜವಂಶದ ಸಂಪ್ರದಾಯದ ಪ್ರಕಾರ, ಜೋಧ್‌ಪುರ-ಮಾರ್ವಾಡ್‌ನ ಮಾಜಿ ರಾಜ ಮಹಾರಾಜ ಗಜ್ ಸಿಂಗ್ ಅವರ ಪ್ರತಿನಿಧಿಯ ಮೂಲಕ ಈ ವಿಶೇಷ ಪೇಟವನ್ನು ಗ್ರಾಮಕ್ಕೆ ಕಳುಹಿಸಿಕೊಡಲಾಗುತ್ತದೆ. ಇನ್ನು ಈ ವಿಶಿಷ್ಟ ಆಚರಣೆಯ ಭಾಗವಾಗಿ, ಗ್ರಾಮದ ರಾಜಗುರುಗಳು ತಮ್ಮ ಕತ್ತಿಯ ತುದಿಯಿಂದ ತಮ್ಮದೇ ಕೈಯನ್ನು ಸ್ವಲ್ಪ ಕೊಯ್ದುಕೊಂಡು, ಅದರಿಂದ ಬರುವ ರಕ್ತವನ್ನು ಬಾಲಕಿಯ ಹಣೆಗೆ ತಿಲಕವಾಗಿ ಇಡುತ್ತಾರೆ. ಇದು ಶತಮಾನಗಳ ಇತಿಹಾಸವಿರುವ ಅತ್ಯಂತ ಅಪರೂಪದ ಧಾರ್ಮಿಕ ಆಚರಣೆಯಾಗಿದೆ.