ಕಾನೂನು ತಜ್ಞರ ಪ್ರಕಾರ, ಮೀನಾಕ್ಷಿ ನಟರಾಜನ್ ಅವರ ಪ್ರಕರಣದಲ್ಲಿ ಈ ಯಾವುದೇ ಹಂತಗಳು ತಲುಪಿಲ್ಲ. ಅಲ್ಲದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 223ರ ಪ್ರಕಾರ, ಆರೋಪಿಗೆ ತನ್ನ ವಾದ ಮಂಡಿಸಲು ಅವಕಾಶ ನೀಡದೆ ಮ್ಯಾಜಿಸ್ಟ್ರೇಟ್ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಹೀಗಾಗಿ, ಕಾನೂನುಬದ್ಧವಾಗಿ ವಿವಾದದಲ್ಲಿರುವ ವಿಷಯವನ್ನು ನಾಮಪತ್ರ ತಿರಸ್ಕಾರಕ್ಕೆ ಪ್ರಮುಖ ಕಾರಣವಾಗಿಸಿದ್ದು ಸರಿಯಲ್ಲ ಎಂಬ ವಾದ ಕೇಳಿಬಂದಿದೆ.