Mango Loot: ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ನೆರವಾಗುವುದು, ಚಾಲಕನ ಜೀವ ಉಳಿಸುವುದು ನಾಗರಿಕ ಸಮಾಜದ ಮೊದಲ ಕರ್ತವ್ಯ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ನಮ್ಮ ಸಮಾಜದ ನಾಗರಿಕ ಪ್ರಜ್ಞೆ ಮತ್ತು ಸಹಾನುಭೂತಿಯನ್ನು ಅಣಕಿಸುವಂತಿದೆ. ಅಪಘಾತಕ್ಕೀಡಾಗಿ ಪಲ್ಟಿಯಾದ ಟ್ರಕ್‌ನಿಂದ ಮಾವಿನ ಹಣ್ಣುಗಳನ್ನು ಕದಿಯಲು ಜನರು ಮುಗಿಬಿದ್ದಿರುವ ದೃಶ್ಯ ಆನ್‌ಲೈನ್‌ನಲ್ಲಿ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.