'ಪಾಪ ರಾಜಕೀಯ ಅಂದ್ರೆ ಏನಂತ ಗೊತ್ತಿಲ್ಲ, ಏನೇನೋ ಮಾತನಾಡಿ ಬಿಡ್ತಾರೆ'; ವಿಜಯ್ ವಿರುದ್ಧ ಸ್ಟಾಲಿನ್ ಲೇವಡಿ..Tamil Nadu Elections
Tamil Nadu Elections
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಿಎಂಕೆ ವಿರುದ್ಧ ವಿಜಯ್ ನೀಡಿದ್ದ ಹೇಳಿಕೆಗಳ ವಿರುದ್ಧ ಕಿಡಿಕಾರಿದ ಎಂಕೆ ಸ್ಟಾಲಿನ್
ರಾಜಕೀಯದಲ್ಲಿ ಬೆಳೆಯಲು ಡಿಎಂಕೆ ಬಗ್ಗೆ ಮಾತನಾಡ್ತಾರೆ ಪಾಪ ಎಂದು ಲೇವಡಿ
ಸಿನಿಮಾದವರಿಗೆ ಮಾರು ಹೋಗಬೇಡಿ, ಕೈಕೊಟ್ಟು ಅವರ ಬಂಗ್ಲೆಯಲ್ಲಿ ಕೂರ್ತಾರೆ ಎಂದು ಡಿಸಿಎಂ ವ್ಯಂಗ್ಯ
ಏಪ್ರಿಲ್ 23ರಂದು ತಮಿಳು ನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ.4ಕ್ಕೆ ಫಲಿತಾಂಶ
Tamil Nadu Elections: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಒಂದು ಕಡೆ Tamilaga Vettri Kazhagam (ಟಿವಿಕೆ) ಭರದಿಂದ ಪ್ರಚಾರ ಕಾರ್ಯ ನಡೆಸಿ, Dravida Munnetra Kazhagam(ಡಿಎಂಕೆ) ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂದು ಕಡೆ ಎಂಕೆ ಸ್ಟಾಲಿನ್ ಅವರು ವಿಜಯ್ ವಿರುದ್ಧ ವಾಕ್ಸಮರ ನಡೆಸುತ್ತಿದ್ದಾರೆ.
ಇತ್ತೀಚೆಗೆ ಟಿವಿಕೆ ಸಂಸ್ಥಾಪಕ ವಿಜಯ್ ಡಿಎಂಕೆ ವಿರುದ್ಧ ಮಾಡಿದ್ದ ರಾಜಕೀಯ ದಾಳಿಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮೊದಲ ಬಾರಿಗೆ ನೇರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇತಿಹಾಸ ಗೊತ್ತಿಲ್ಲ
ನಟ ವಿಜಯ್ ಅವರು ಮಾಡಿದ್ದೆ ಟೀಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, 'ಕೆಲವರು ಈಗಷ್ಟೇ ರಾಜಕೀಯಕ್ಕೆ ಬಂದಿದ್ದಾರೆ. ಅವರಿಗೆ ಯಾವುದರ ಇತಿಹಾಸವೂ ಗೊತ್ತಿಲ್ಲ, ರಾಜಕೀಯದ ಆಳ-ಅಗಲ, ಗಂಧ-ಗಾಳಿಯೂ ತಿಳಿದಿಲ್ಲ. ಹೀಗಾಗಿ ಪಾಪಾ ಏನೇನೋ ಮಾತನಾಡುತ್ತಿದ್ದಾರೆ' ಎಂದು ಲೇವಡಿ ಮಾಡಿದರು.
'ತಮಿಳುನಾಡಿನ ಯಾವುದೇ ರಾಜ್ಯದ, ಯಾವುದೇ ಗ್ರಾಮದ ಮೂಲೆಗೆ ಹೋದರು ಡಿಎಂಕೆಯಿಂದಾದ ಪ್ರಯೋಜನವನ್ನು ಜನ ಮಾತನಾಡ್ತಾರೆ. ಮೀಸಲಾತಿಯಿಂದಾದ ಲಾಭದ ಬಗ್ಗೆ ಮಾತನಾಡುತ್ತಾರೆ. ಡಿಎಂಕೆ ಎಂಬುದು ಕೇವಲ ಪಕ್ಷವಲ್ಲ, ಅದು ಒಂದು ಸಿದ್ಧಾಂತ. ಇಂತಹ ಸಣ್ಣಪುಟ್ಟ ಟೀಕೆಗಳಿಂದ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ' ಎಂದರು.
ಡಿಎಂಕೆಯನ್ನು ಅಲುಗಾಡಿಸೋಕಾಗಲ್ಲ
ವಿಜಯ್ ಅವರು ಸನಾತನ ಧರ್ಮ ಮತ್ತು ವಂಶಪಾರಂಪರ್ಯ ರಾಜಕೀಯದ ಬಗ್ಗೆ ನೀಡಿದ್ದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಉದಯನಿಧಿ ಸ್ಟಾಲಿನ್ ಅವರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು ಹಾಗೂ ಟೀಕೆಗಳು ಕೇವಲ ಪ್ರಚಾರಕ್ಕಾಗಿ ಎಂದು ತಳ್ಳಿಹಾಕಿದರು. ಅಭಿವೃದ್ಧಿಯೇ ಡಿಎಂಕೆಯ ಮಂತ್ರ. ನಮ್ಮ ಗುರಿ ರಾಜ್ಯದ ಅಭಿವೃದ್ಧಿ ಮತ್ತು ಜನರ ಕಲ್ಯಾಣವೇ ಹೊರತು, ಹೊಸದಾಗಿ ಬಂದವರ ಆರೋಪಗಳಿಗೆ ಉತ್ತರ ಕೊಡುತ್ತ ಕೂರೋದಲ್ಲ ಎಂದು ಸ್ಟಾಲಿನ್ ಸ್ಪಷ್ಟಪಡಿಸಿದರು.
ನಟ ವಿಜಯ್ ತಮ್ಮ ಮೊದಲ ರಾಜಕೀಯ ಸಮಾವೇಶದಲ್ಲಿ ಡಿಎಂಕೆ ಸರ್ಕಾರವನ್ನು ಕುಟುಂಬ ರಾಜಕಾರಣದ ಬಗ್ಗೆ (Family Company) ಎಂದು ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಸ್ಟಾಲಿನ್, ರಾಜ್ಯದಲ್ಲಿ ಡಿಎಂಕೆ ಸರ್ಕಾರವು ಮಾಡಿರುವ ಜನಪರ ಕೆಲಸಗಳು ಮತ್ತು ಸಾಮಾಜಿಕ ನ್ಯಾಯದ ಹಾದಿಯನ್ನು ವಿವರಿಸಿದರು.
ಉದಯನಿಧಿ ಹೇಳಿದ್ದೇನು
'ಸಿನಿಮಾದವರನ್ನು ನಂಬಬೇಡಿ. ಎಲೆಕ್ಷನ್ ನಂತ್ರ ಅವರು ತಮ್ಮ ಬಂಗಲೆ ಸೇರಿಕೊಳ್ಳುತ್ತಾರೆ. ಜನರಿಗಾಗಿ ಅಖಾಡಕ್ಕಿಳಿದು ಉದ್ಧಾರ ಕಾರ್ಯಗಳನ್ನು ಮಾಡೋದಿಲ್ಲ' ಎಂದು ಡಿಸಿಎಂ ಉದಯನಿಧಿ ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).