ಸ್ಥಳೀಯರಿಂದ ಕೊಲೆ ಮಾಹಿತಿ ಜಿಲ್ಲಾ ಎಸ್ಪಿಗೆ ತಲುಪಿದ್ದು, ಅವರು ಸ್ಥಳೀಯ ಪೊಲೀಸರಿಗೆ ಭಾರೀ ಪಡೆಯೊಂದಿಗೆ ಹೋಗಿ ಆರೋಪಿಯನ್ನು ಬಂಧಿಸುವಂತೆ ಆದೇಶಿಸಿದ್ದಾರೆ. ಆರೋಪಿ ಮನೆಗೆ ಬಂದ ಪೊಲೀಸರು ಮನೆ ಸುತ್ತುವರೆದು, ಒಳ ಪ್ರವೇಶಿಸಿದ್ದು, ಆರೋಪಿ ಏನೂ ನಡೆದಿಲ್ಲ ಎಂಬಂತೆ ಅಡುಗೆ ಮಾಡ್ತಿದ್ದ ಎನ್ನಲಾಗಿದೆ. ತಕ್ಷಣ ಪೊಲೀಸರು ಆತನನ್ನು ಬಂಧಿಸಿ, ರುಂಡವನ್ನು ಮತ್ತು ಹತ್ಯೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಂಡಿದ್ದು, ಬಬ್ಲುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ (ಏಜೆನ್ಸೀಸ್).