ಲಿಂಗ ಪರಿವರ್ತನೆ ಮಾಡಿಸಿಕೊಂಡ ಮಾಜಿ ಕ್ರಿಕೆಟರ್ ಸಂಜಯ್ ಬಂಗಾರ ಪುತ್ರ; ತಂದೆಯ ಬೆಂಬಲಕ್ಕೆ ಕೃತಜ್ಞತೆ | Sanjay Bangar

ಸಂಜಯ್ ಬಂಗಾರ ಮತ್ತು ಪುತ್ರಿಯಾದ ಅನಯಾ ಬಂಗಾರ್
ಸಂಜಯ್ ಬಂಗಾರ ಮತ್ತು ಪುತ್ರಿಯಾದ ಅನಯಾ ಬಂಗಾರ್
Published on
ನವದೆಹಲಿ: ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ ಅವರ ಪುತ್ರ ಆರ್ಯನ್ ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗಿದ್ದು, ಅನಾಯ ಬಂಗಾರ್ ಆಗಿ ಬದಲಾಗಿದ್ದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆ ಮೂಲಕ ಬಹಿರಂಗ ಪಡಿಸಿದ್ದಾರೆ. ಮತ್ತು ಈ ನಿರ್ಧಾರವನ್ನು ಬೆಂಬಲಿಸಿದ್ದಕ್ಕೆ ತಮ್ಮ ತಂದೆಗೆ ಧನ್ಯವಾದ ಅರ್ಪಿಸಿದ್ದಾರೆ.
ಥೈಲ್ಯಾಂಡ್‌ನಲ್ಲಿ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆದಿದೆ. ಸಂಜಯ್ ಬಂಗಾರ್ ಮತ್ತುವೈಶಾಲಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಮಗನ ಹೆಸರು ಅಥರ್ವ ಮತ್ತು ಎರಡನೇ ಮಗನ ಹೆಸರು ಆರ್ಯನ್. ಮೊದಲ ಪುತ್ರ ಅಥರ್ವಾ ಕ್ರಿಕೆಟ್​ನಲ್ಲಿ ವೃತ್ತಿಯನ್ನು ಆರಂಭಿಸಲು ಮುಂದಾಗಿದ್ದಾರೆ. ಆದರೆ ಎರಡನೇ ಪುತ್ರ ಆರ್ಯನ್ ಹಾರ್ಮೋನ್ ಸಮಸ್ಯೆಯಿಂದ ಹುಡುಗಿಯಾಗಿ ಬದಲಾಗಿದ್ದಾರೆ.
ಈ ಕುರಿತು ಪೋಸ್ಟ್ ಹಾಕಿರುವ ಅನಯಾ ಬಂಗಾರ್, ಈ ಪ್ರಯಾಣ ನನಗೆ ಅಥವಾ ನನ್ನ ಕುಟುಂಬಕ್ಕೆ ಸುಲಭವಾಗಿರಲಿಲ್ಲ. ನನ್ನನ್ನು ಅರ್ಥಮಾಡಿಕೊಳ್ಳಲು, ಸ್ವೀಕರಿಸಲು ಮತ್ತು ಬೆಂಬಲಿಸಲು ಸಮಯ ತೆಗೆದುಕೊಂಡಿತು. ಇದೆಲ್ಲವೂ ತಕ್ಷಣವೇ ಆಗಲಿಲ್ಲ. ಕೆಲವೊಮ್ಮೆ, ನಾವು ಗೊಂದಲಕ್ಕೊಳಗಾಗಿದ್ದೆವು. ಅನೇಕ ಪ್ರಶ್ನೆಗಳು ನಮ್ಮನ್ನು ಸುತ್ತುವರೆದವು. ಅಂತಿಮವಾಗಿ, ನಾನು ಇಂದು ಇಲ್ಲಿದ್ದೇನೆ. ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ. 
ನನ್ನ ಜೀವನದ ಈ ಪ್ರಮುಖ ಹಂತದಲ್ಲಿ ನನ್ನ ತಂದೆ ನನಗಾಗಿ ಇದ್ದರು. ಅವರ ಬೆಂಬಲ ಸ್ವಲ್ಪ ತಡವಾದರೂ, ಅವರು ನನಗೆ ತಮ್ಮ ಪ್ರೀತಿಯನ್ನು ಸಂಪೂರ್ಣವಾಗಿ ತೋರಿಸಿದರು. ಈ ಶಸ್ತ್ರಚಿಕಿತ್ಸೆ ನನ್ನ ಜೀವನದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ನನ್ನ ತಂದೆ ನನ್ನ ಪಕ್ಕದಲ್ಲಿದ್ದ ಕಾರಣ ಮಾತ್ರ ಇದು ಸಾಧ್ಯವಾಯಿತು. ಪ್ರೀತಿ ಮತ್ತು ಬೆಳವಣಿಗೆಗೆ ಸಮಯ ಬೇಕಾಗುತ್ತದೆ. ಈ ವಿಷಯಗಳು ನಮ್ಮ ಜೀವನದಲ್ಲಿ ಬಂದ ನಂತರ, ಅವು ಬೇರೆ ಯಾವುದಕ್ಕಿಂತ ಹೆಚ್ಚು ಅಮೂಲ್ಯವಾಗುತ್ತವೆ. ಅದಕ್ಕಾಗಿಯೇ ನಾನು ಯಾವಾಗಲೂ ನನ್ನ ತಂದೆಗೆ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net