ಸಿಪಿಐ(ಎಂ) ಮುಖಂಡ ಕೆ.ಲತೇಶ್ ಹತ್ಯೆ ಪ್ರಕರಣ: 7 ಮಂದಿ ಬಿಜೆಪಿ ಮತ್ತು RSS ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ!

BJP and RSS workers
BJP and RSS workers
Published on
ತಲಶ್ಶೇರಿ (ಕೇರಳ): ಸುಮಾರು 17 ವರ್ಷಗಳ ಹಿಂದೆ ನಡೆದಿದ್ದ ಸಿಪಿಐ(ಎಂ) ಮುಖಂಡ ಕೆ. ಲತೇಶ್ (28) ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿನ ಅಡಿಷನಲ್ ಡಿಸ್ಟ್ರಿಕ್ಟ್ ಅಂಡ್ ಸೆಷನ್ಸ್ ಕೋರ್ಟ್ ಗುರುವಾರ (ಜನವರಿ 8) ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ ಏಳು ಮಂದಿ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1.40 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶರಾದ ಜೆ. ವಿಮಲ್ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ

2008ರ ಡಿಸೆಂಬರ್ 31ರಂದು ತಲಶ್ಶೇರಿ ಸಮೀಪದ ಚಾಕ್ಯಾತ್ಮುಕ್ಕು ಕಡಲತೀರದಲ್ಲಿ ಈ ಘಟನೆ ನಡೆದಿತ್ತು. ಸಿಪಿಐ(ಎಂ) ತಿರುವಂಗಾಡ್ ಲೋಕಲ್ ಕಮಿಟಿ ಸದಸ್ಯ ಹಾಗೂ ಸಿಐಟಿಯು ಮುಖಂಡರಾಗಿದ್ದ ಕೆ. ಲತೇಶ್ ಅವರನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ದಾಳಿಯ ಸಂದರ್ಭದಲ್ಲಿ ಲತೇಶ್ ಅವರ ಜೊತೆಗಿದ್ದ ಇತರ ಮೂವರು ಕಾರ್ಯಕರ್ತರಿಗೂ ಗಂಭೀರ ಗಾಯಗಳಾಗಿದ್ದವು.

ನ್ಯಾಯಾಲಯದ ತೀರ್ಪು

ಈ ಪ್ರಕರಣದಲ್ಲಿ ಒಟ್ಟು 12 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 9 ರಿಂದ 12ನೇ ಆರೋಪಿಗಳನ್ನು ನ್ಯಾಯಾಲಯವು ಖಲಾಸೆ ಮಾಡಿದೆ. ಆದರೆ, 1 ರಿಂದ 7ನೇ ಆರೋಪಿಗಳು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
ನಾಲ್ಕು ಪ್ರತ್ಯೇಕ ಸೆಕ್ಷನ್‌ಗಳ ಅಡಿಯಲ್ಲಿ ಒಟ್ಟು 35 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದ್ದು, ಎಲ್ಲವನ್ನೂ ಏಕಕಾಲದಲ್ಲಿ (Concurrently) ಅನುಭವಿಸಬೇಕೆಂದು ಕೋರ್ಟ್ ತಿಳಿಸಿದೆ.ದೋಷಿಗಳಾದ ಸುಮಿತ್, ಪ್ರಜೀಶ್ ಬಾಬು, ನಿಧಿನ್, ಸನಲ್, ರಿಜೋಷ್, ಸಜೀಶ್ ಮತ್ತು ಜಯೇಶ್ ಶಿಕ್ಷೆಗೆ ಗುರಿಯಾದವರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net