ವೈವಾಹಿಕ ಸಮಸ್ಯೆ ಬಗ್ಗೆ ಸಲಹೆ ನೀಡುತ್ತಿದ್ದ ದಂಪತಿಗಳೇ ಜಗಳ; ಸೆಟ್​ ಟಾಪ್​​​ ಬಾಕ್ಸ್​​ನಿಂದ ಹಲ್ಲೆ; ಎಫ್​ಐಆರ್

ಮಾರಿಯೋ ಜೋಸೆಫ್ ಮತ್ತು ಗಿಗಿ ಮಾರಿಯೋ
ಮಾರಿಯೋ ಜೋಸೆಫ್ ಮತ್ತು ಗಿಗಿ ಮಾರಿಯೋ
Published on
ಕೊಚ್ಚಿ: ಕೇರಳದಲ್ಲಿ ಬಹಳ ಜನಪ್ರಿಯರಾಗಿದ್ದ, ದಾಂಪತ್ಯ ಮತ್ತು ವೈವಾಹಿಕ ಸಮಸ್ಯೆಗಳ ಬಗ್ಗೆ ಸಲಹೆ ನೀಡುತ್ತಿದ್ದ ಸೆಲೆಬ್ರೆಟಿ ದಂಪತಿಗಳ ನಡುವೆಯೇ ಕೌಟುಂಬಿಕ ಕಲಹ ನಡೆದಿದೆ. ಪತಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎಫ್​ಐಆರ್ ದಾಖಲಾಗಿದೆ.
ಗಿಗಿ ಮಾರಿಯೋ ಮತ್ತು ಮಾರಿಯೋ ಜೋಸೆಫ್ ಗಲಾಟೆ ಮಾಡಿಕೊಂಡ ದಂಪತಿ. ಫಿಲೋಕಾಲಿಯಾ ಎಂಬ ಫೌಂಡೇಶನ್‌ನ ಸ್ಥಾಪಕರು. ಇದು ಕುಟುಂಬ ಸಮಾಲೋಚನೆ, ವೈವಾಹಿಕ ಸೇವೆಗಳು ಹಾಗೂ ಇತರ ದತ್ತಿ ಸೇವೆಗಳ ಸಲಹೆ ನೀಡುತ್ತದೆ. ಇದಕ್ಕಾಗಿ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಖ್ಯೆಯ ಬೆಂಬಲಿಗರನ್ನು ಹೊಂದಿದ್ದಾರೆ.
ಪತ್ನಿ ಗಿಗಿ ಮಾರಿಯೋ ನೀಡಿದ ದೂರಿನ ಆಧಾರದ ಮೇಲೆ ನ. 01ರಂದು ತ್ರಿಶೂರ್ ಜಿಲ್ಲೆಯ ಚಾಲಕುಡಿ ಠಾಣೆಯಲ್ಲಿ ಪತಿ ಮಾರಿಯೋ ಜೋಸೆಫ್​ ವಿರುದ್ಧ ಎಫ್​ಐಆರ್ ದಾಖಲಾಗಿದೆ.
ಪತ್ನಿ ಗಿಗಿ ಮಾರಿಯೋ ಪ್ರಕಾರ, ಕಳೆದ ಒಂಬತ್ತು ತಿಂಗಳಿನಿಂದ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಅ. 25ರಂದು ಪತಿ ಮಾರಿಯೋ ಜೋಸೆಫ್​ ಮನೆಗೆ ಬಂದು ಭಿನ್ನಾಭಿಪ್ರಾಯದ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ನಡೆದು, ಮಾರಿಯೋ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಕೂದಲು ಎಳೆದಾಡಿ, ಸೆಟ್​ ಟಾಪ್​ ಬಾಕ್ಸ್​ನಿಂದ ತಲೆಗೆ ಹೊಡೆದಿದ್ದಾನೆ. 70 ಸಾವಿರ ರೂ. ಮೌಲ್ಯದ ಐಫೋನ್​ ಅನ್ನು ಒಡೆದು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net