ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ: ಕೇಸ್; ಎಸಿಪಿ ಮನಸ್ವಿ ವಶಿಷ್ಠ ಅಮಾನತು!..Delhi Police

ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ:  ಕೇಸ್; ಎಸಿಪಿ ಮನಸ್ವಿ ವಶಿಷ್ಠ ಅಮಾನತು!..Delhi Police
Published on: 
  • ದೆಹಲಿ ಪೊಲೀಸರಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಹಾಯಕ ಪೊಲೀಸ್ ಆಯುಕ್ತ ಮನಸ್ವಿ ವಶಿಷ್ಠ ಅಮಾನತು.

  • ಅಕ್ಟೋಬರ್ 23 ರಂದು ಶಹದಾರಾ ಪೊಲೀಸ್ ಠಾಣೆಯಲ್ಲಿ ವಕೀಲರೊಂದಿಗಿನ ಘರ್ಷಣೆಯ ಬಳಿಕ ನಡೆದ ಬೆಳವಣಿಗೆ.

  • ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಖಂಡಿಸಿ ಸೋಮವಾರ ನಡೆದಿದ್ದ ಪ್ರತಿಭಟನೆ.

ನವದೆಹಲಿ: ವಕೀಲರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದ ಬಳಿಕ ಇಬ್ಬರು ಪೊಲೀಸರ ವರ್ಗಾವಣೆಯನ್ನು ಖಂಡಿಸಿ ದೆಹಲಿ ಪೊಲೀಸರು ಸೋಮವಾರ ಪ್ರತಿಭಟನೆ ನಡೆಸಿದ್ದರು. ಸಿಬ್ಬಂದಿ ನಡೆಸಿದ ಪ್ರತಿಭಟನೆಗೆ ಪೊಲೀಸ್ ಆಯುಕ್ತ ಮನಸ್ವಿ ವಶಿಷ್ಠ ನೇತೃತ್ವ ವಹಿಸಿದ್ದರು ಎಂದು ಆರೋಪಿಸಿ, ಅವರನ್ನು ಅಮಾನತುಗೊಳಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ವರ್ಗಾವಣೆ ವಿರುದ್ಧ ಕಿಡಿ

ಅ.23ರಂದು ದೆಹಲಿಯ ಶಹದಾರಾ ಪೊಲೀಸ್​ ಠಾಣೆಯಲ್ಲಿ ವಕೀಲರೊಂದಿಗೆ ವಾಗ್ವಾದ ಉಂಟಾಗಿತ್ತು. ಶಹದಾರ ಉಪವಿಭಾಗದ ಗಾಂಧಿ ನಗರದ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಹುದ್ದೆಯಿಂದ ವಶಿಷ್ಠ ಅವರನ್ನು ಮಹಿಳೆಯರು ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಕುಮಾರ್ ಅವರನ್ನು ಶಹದಾರ ಪೊಲೀಸ್ ಠಾಣೆಯಿಂದ ದೆಹಲಿ ಪೊಲೀಸ್ ಭದ್ರತಾ ಶಾಖೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಈ ವರ್ಗಾವಣೆ ಆದೇಶಗಳು ಹೊರಬಂದ ಬೆನ್ನಲ್ಲೇ ವಕೀಲರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ.

Also Read
ದೀಪಾವಳಿಯ ನ. 07 ಮತ್ತು 08ರಂದು ದೆಹಲಿ-ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿದ ಸುಪ್ರೀಕೋರ್ಟ್ | Supreme Court
ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ:  ಕೇಸ್; ಎಸಿಪಿ ಮನಸ್ವಿ ವಶಿಷ್ಠ ಅಮಾನತು!..Delhi Police

ಮರು ನೇಮಕಕ್ಕೆ ಆಗ್ರಹ

ಆದರೆ, ಇಬ್ಬರ ವರ್ಗಾವಣೆಯನ್ನು ವಿರೋಧಿಸಿ ಮಹಿಳಾ ಅಧಿಕಾರಿಗಳು ಸೇರಿದಂತೆ ಸುಮಾರು 150 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಇಬ್ಬರ ವರ್ಗಾವಣೆಯನ್ನು ಖಂಡಿಸಿದರು. ಇಬ್ಬರನ್ನು ಮತ್ತೆ ಅವರ ಹಿಂದಿನ ಹುದ್ದೆಗಳಿಗೆ ಮರು ನೇಮಕ ಮಾಡಬೇಕೆಂದು ಒತ್ತಾಯಿಸಿದರು. ಮಹಿಳಾ ಅಧಿಕಾರಿಗಳು ಸೇರಿದಂತೆ ಸುಮಾರು 100 ಪೊಲೀಸ್ ಸಿಬ್ಬಂದಿ ಫಲಕಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು.

ಪೊಲೀಸ್ ಸಿಬ್ಬಂದಿಯ ನಿಯೋಗವು ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರನ್ನು ಭೇಟಿ ಮಾಡಿ ಐದು ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಿತ್ತು. ಶಹದಾರಾ ಘಟನೆಯಲ್ಲಿ ಭಾಗಿಯಾಗಿರುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ದಾಂಧಲೆ ನಡೆಸುವ ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸುವುದು ಈ ಬೇಡಿಕೆಗಳಲ್ಲಿ ಸೇರಿದ್ದವು. ಹಿರಿಯ ಅಧಿಕಾರಿಗಳು ಪ್ರತಿಭಟನಾ ನಿರತ ಪೊಲೀಸರ ಮನವೊಲಿಸಲು ಪ್ರಯತ್ನಿಸಿದರು.

ಅಧಿಕೃತ ಮಾಹಿತಿ ಸಿಕ್ಕಿಲ್ಲ

ಪೊಲೀಸ್ ಆಯುಕ್ತ ಮನಸ್ವಿ ವಶಿಷ್ಠ ಅವರನ್ನು ಅಮಾನತುಗೊಳಿಸಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಲವು ಮೂಲಗಳಿಂದ ಕೇಳಿಬಂದಿದ್ದು, ಈ ನಡೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ, (ಏಜೆನ್ಸೀಸ್).