ಸರ್ಕಾರದ ನೀತಿಗಳು ಮತ್ತು ಇತ್ತೀಚಿನ ಘಟನೆಗಳನ್ನು ವಿರೋಧಿಸಿ ಕಪ್ಪು ಬಟ್ಟೆ ಧರಿಸಿ 'ಕಪ್ಪು ದಿನ' ಆಚರಿಸಲಾಗುತ್ತಿದೆ. ಸಂಸತ್ ಮುಂದೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್, ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಸಂಸದ ಪವನ್ ಖೇರಾ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜನ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ಹೋರಾಟಕ್ಕೆ ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಹಾಗೂ ಫೈಜಾಬಾದ್ (ಅಯೋಧ್ಯೆ) ಸಂಸದ ಅವಧೇಶ್ ಪ್ರಸಾದ್ ಸೇರಿದಂತೆ ಹಲವು ‘ಇಂಡಿ’ (INDIA) ಒಕ್ಕೂಟದ ಸಂಸದರು ಸಾಥ್ ನೀಡಿದ್ದಾರೆ.