ಶಶಿ ತರೂರ್​ಗೆ ಕಾಂಗ್ರೆಸ್ ಎಚ್ಚರಿಕೆ; ಪಕ್ಷದ ಶಿಸ್ತು ಪಾಲಿಸದಿದ್ರೂ ಬಿಜೆಪಿ ಸಮಾಧಾನಪಡಿಸುವ ಹೇಳಿಕೆ ತಪ್ಪಿಸಬೇಕು: ಕೆ.ಸಿ.ವೇಣುಗೋಪಾಲ್ | Shashi Tharoor

ಕಾಂಗ್ರೆಸ್ ಸಂಸದ ಶಶಿ ತರೂರ್
ಕಾಂಗ್ರೆಸ್ ಸಂಸದ ಶಶಿ ತರೂರ್
Published on
ನವದೆಹಲಿ: ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಚಳುವಳಿಯೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಛತ್ರೋನ್ ಕಿ ಗೂಂಜ್ ಕಾರ್ಯಕ್ರಮವನ್ನು ಹೋಲಿಸಿ ಮಾತನಾಡಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್​ಗೆ(Shashi Tharoor) ಕಾಂಗ್ರೆಸ್ ಎಚ್ಚರಿಕೆ ನೀಡಿದ್ದು, ಪಕ್ಷದ ಶಿಸ್ತು ಪಾಲಿಸದಿದ್ರೂ ಬಿಜೆಪಿ ಸಮಾಧಾನಪಡಿಸುವ ಹೇಳಿಕೆ ತಪ್ಪಿಸಬೇಕು ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ತಿಳಿದೋ ತಿಳಿಯದೆಯೋ ನಾವೆಲ್ಲರೂ ಅನಗತ್ಯ ಹೇಳಿಕೆಗಳನ್ನು ನೀಡದಂತೆ ಎಚ್ಚರ ವಹಿಸಬೇಕು. ಮತ್ತು ಶಶಿ ತರೂರ್ ಅದನ್ನು ತಿಳಿದೇ ಹೇಳಿದ್ದಾರೆಂದು ನಾನು ನಂಬುವುದಿಲ್ಲ, ಅಥವಾ ಅದನ್ನು ಉದ್ದೇಶಪೂರ್ವಕವಾಗಿ ಹೇಳುವ ಸಾಧ್ಯತೆಯೂ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸದಸ್ಯರು ಯಾವಾಗಲೂ ಪಕ್ಷದ ಚೌಕಟ್ಟುಗಳು ಅಥವಾ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೂ ಸಹ, ಬಿಜೆಪಿಯನ್ನು ಸಮಾಧಾನಪಡಿಸುವ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಲು ನಾವು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ಸಂಸದ ಶಶಿ ತರೂರ್ ಹೇಳಿದ್ದೇನು?

ಶನಿವಾರ(ಆ.08) ಮುಂಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಮೂವ್ಮೆಂಟ್ ಟು ಯುನೈಟ್ ನೇಸನ್ಸ್ 15ನೇ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡಿದ್ದ ಶಶಿ ತರೂರ್, ರಾಹುಲ್ ಗಾಂಧಿ ಅವರ ಛಾತ್ರೋನ್ ಕೀ ಗೂಂಜ್ ಕಾರ್ಯಕ್ರಮಕ್ಕೆ ಯುವಜನತೆಯಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎಂದಿದ್ದರು. ಮತ್ತು ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳಿಗೆ ಸಿಕ್ಕಷ್ಟು ಜನಬೆಂಬಲ ಕಾಂಗ್ರೆಸ್ ಪ್ರಯತ್ನಕ್ಕೆ ಏಕೆ ಸಿಗಲಿಲ್ಲ ಎಂಬ ಬಗ್ಗೆ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು.

ಮುಂದುವರೆದು, ಸಿಜೆಪಿ ಮತ್ತು ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಎತ್ತಿದ ಪೇಪರ್​ ಲೀಕ್​ ಮುಂತಾದ ವಿಷಯಗಳನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ಛಾತ್ರೋನ್ ಕೀ ಗೂಂಜ್ ಅಭಿಯಾನದ ಮೂಲಕ ಈಗಾಗಲೇ ಪ್ರಸ್ತಾಪಿಸಿದ್ದರು. ನಾವು ಎತ್ತಿದ ವಿಷಯಗಳೇ ಪ್ರತಿಭಟನೆಯಲ್ಲಿ ಮುನ್ನೆಲೆಗೆ ಬಂದರೂ, ನಮ್ಮ ಅಭಿಯಾನಕ್ಕೆ ಸಿಗದಷ್ಟು ಅಭೂತಪೂರ್ವ ಬೆಂಬಲ ಆ ಪ್ರತಿಭಟನೆಗೆ ಸಿಕ್ಕಿದೆ. ಹೀಗಾಗಿ ನಾವು ಎಲ್ಲಿ ಎಡವಿದೆವು..? ಯುವಜನರ ಧ್ವನಿಯನ್ನು ಆಲಿಸಲು ನಾವು ವಿಫಲವಾದೆವೇ..? ಜನಸ್ಪಂದನೆಯನ್ನು ಗ್ರಹಿಸುವಲ್ಲಿ ನಮ್ಮ ಪ್ರಯತ್ನ ಕೊರತೆಯಾಯಿತೇ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕಿದೆ ಎಂದಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net