ಭಾರತವನ್ನು ಗಲ್ಫ್​ ದೇಶಗಳು ಶತ್ರು ರೀತಿ ಪರಿಗಣಿಸಬೇಕೆಂದು ಕಾಂಗ್ರೆಸ್ ಬಯಸುತ್ತಿದೆ; ಪ್ರಧಾನಿ ಮೋದಿ ಆರೋಪ | PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ತಿರುವನಂತಪುರಂ: ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಗಲ್ಫ್​ ರಾಷ್ಟ್ರಗಳು ಭಾರತವನ್ನು ಶತ್ರು ದೇಶವೆಂದು ಪರಿಗಣಿಸಬೇಕೆಂದು ಕಾಂಗ್ರೆಸ್ ಬಯಸುತ್ತಿದೆ ಎಂದು ಆರೋಪಿಸಿರುವ ಪ್ರಧಾನಿ ಮೋದಿ(PM Modi), ಕಾಂಗ್ರೆಸ್ ನಾಯಕರ ಅಪಾಯಕಾರಿ ಹೇಳಿಕೆಗಳಿಂದ ಗಲ್ಫ್​ನಲ್ಲಿರುವ ಭಾರತೀಯರನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇರಳದ ತಿರುವಲ್ಲದಲ್ಲಿ ಚುನಾವಣೆ ನಡೆಯಲಿರುವ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಪಶ್ಚಿಮ ಏಷ್ಯಾದ ದೇಶಗಳು ಭಾರತವನ್ನು ತಮ್ಮ ಶತ್ರು ಎಂದು ಪರಿಗಣಿಸಬೇಕೆಂದು ಕಾಂಗ್ರೆಸ್ ಬಯಸುತ್ತದೆ. ನಾವು ಇಲ್ಲಿ ಏನಾದ್ರೂ ತಪ್ಪು ಮಾಡಬೇಕು. ಅಂತಹ ಹೇಳಿಕೆಗಳನ್ನು ನೀಡಬೇಕೆಂದು ಕಾಂಗ್ರೆಸ್ ಗಲ್ಫ್​ ರಾಷ್ಟ್ರಗಳನ್ನು ಕೆರಳಿಸುವ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ಗಲ್ಫ್ ದೇಶಗಳಲ್ಲಿ ವಾಸಿಸುವ ಭಾರತೀಯರಿಗೆ ತೊಂದರೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಭಯವನ್ನು ಹರಡಲು ಮತ್ತು ನನ್ನನ್ನು ನಿಂದಿಸಲು ಅವಕಾಶವನ್ನು ಪಡೆಯಲು ಬಯಸುತ್ತದೆ. ಕಾಂಗ್ರೆಸ್, ಎಲ್‌ಡಿಎಫ್, ಯುಡಿಎಫ್ ಜನರಿಗೆ ನಾನು ಹೇಳಲು ಬಯಸುತ್ತೇನೆ, ರಾಜಕೀಯಕ್ಕೆ ಒಂದು ಸ್ಥಾನವಿದೆ, ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ನನಗೆ, ಅಲ್ಲಿನ ಲಕ್ಷಾಂತರ ಕೇರಳಿಗರ ಸುರಕ್ಷತೆಯೇ ಆದ್ಯತೆಯಾಗಿದೆ ಮತ್ತು ನಾನು ಅದಕ್ಕೆ ಬದ್ಧನಾಗಿದ್ದೇನೆ ಎಂದು ಪ್ರತಿಪಾದಿಸಿದ್ದಾರೆ.
ಗಲ್ಫ್​ ರಾಷ್ಟ್ರಗಳು ಭಾರತೀಯರನ್ನು ತಮ್ಮ ಕುಟುಂಬದವರೆಂದು ಪರಿಗಣಿಸುತ್ತಿದ್ದು, ಅವರನ್ನು ರಕ್ಷಿಸುತ್ತಿವೆ. ಆದರೆ ಇಲ್ಲಿನ ವಿಪಕ್ಷಗಳ ನಾಯಕರು ಅಸಂಬದ್ಧ ಮಾತಿನಿಂದ ಅಲ್ಲಿ ವಾಸಿಸುವ ನಮ್ಮ ಲಕ್ಷಾಂತರ ಸಹೋದರ ಸಹೋದರಿಯರ ಸುರಕ್ಷತೆ ಭಂಗವಾಗಬಹುದು. ಆ ರೀತಿ ಮಾತನಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.
ಏಪ್ರಿಲ್ 9ರಂದು ಕೇರಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಆಡಳಿತರೂಢ ಸಿಪಿಎಂ ನೇತೃತ್ವದ ಎಲ್​ಡಿಎಫ್​ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್​ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಡುವೆ ಖಾತೆ ತೆರೆಯಲು ಬಿಜೆಪಿ ತೀವ್ರ ಕಸರತ್ತು ನಡೆಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net