ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಮತ್ತು ಭಾಷಣ ಮಾಡುವುದು ತೀರಾ ಅಪರೂಪ. ಅಂತಹ ದೋವಲ್ ಇತ್ತೀಚೆಗೆ ಸಮಾರಂಭವೊಂದರಲ್ಲಿ ಪ್ರಸ್ತಾಪಿಸಿರುವ ಎರಡು ಪ್ರಮುಖ ಅಂಶಗಳು ಹೆಚ್ಚು ಗಮನ ಸೆಳೆದವು. ನಮ್ಮದು ಅತ್ಯಂತ ಉನ್ನತ ನಾಗರಿಕತೆಯೇ ಆಗಿತ್ತು. ನಾವು ಯಾರ ದೇವಾಲಯಗಳನ್ನೂ ಒಡೆಯಲಿಲ್ಲ. ಜಗತ್ತು ದುರ್ಬಲವಾಗಿದ್ದರೂ, ನಾವು ವಿದೇಶಗಳ ಮೇಲೆ ದಾಳಿ ಮಾಡಲಿಲ್ಲ ಎಂಬುದು ಒಂದು. ಮತ್ತೊಂದು, ಮೌಲ್ಯಗಳು ನಾಗರಿಕತೆಯನ್ನು ರೂಪಿಸಿದರೆ, ಎಚ್ಚರಿಕೆ ಎಂಬುದು ಅದನ್ನು ರಕ್ಷಿಸುತ್ತದೆ; ನಾವು ಯಾರು ಎಂಬುದನ್ನು ನೆನಪಿಸಿಕೊಳ್ಳುವುದು ಮುಖ್ಯವೇ. ಅದಕ್ಕಿಂತ ಮುಖ್ಯವಾದುದು ಜಗತ್ತು ಇಂದೇನಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು. ಈ ಮಾತು ಶತ ಶತಮಾನಗಳ ಇತಿಹಾಸದಿಂದ ಹಿಡಿದು ತೀರಾ ಇತ್ತೀಚಿನ ವರ್ತಮಾನದ ಬೆಳವಣಿಗೆಗಳವರೆಗೆ ಅನ್ವಯಿಕವಾದದ್ದು ಎಂದು ಅನಿಸುತ್ತದೆ. ಹೌದು, ದೋವಲ್ ಯಾರನ್ನು ಕುರಿತು ಈ ಮಾತು ಹೇಳಿದರು?