ಕಾಂಗ್ರೆಸ್ ಅನ್ನೋದು ಕೇವಲ ಒಂದು ಪಕ್ಷವಲ್ಲ, ಅದು ಭಾರತದ ಆತ್ಮದ ಧ್ವನಿ: ರಾಹುಲ್ ಗಾಂಧಿ | Rahul Gandhi

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ನವದೆಹಲಿ: ಕಾಂಗ್ರೆಸ್ ಅನ್ನೋದು ಕೇವಲ ಒಂದು ರಾಜಕೀಯ ಪಕ್ಷವಲ್ಲ, ಅದು ಭಾರತದ ಆತ್ಮದ ಧ್ವನಿ ಎಂದು ಭಾನುವಾರ(ಡಿ. 28) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 140ನೇ ಸಂಸ್ಥಾಪನಾ ದಿನದಂದು ಎಕ್ಸ್​​ನಲ್ಲಿ ಪೋಸ್ಟ್ ಹಾಕಿರುವ ಅವರು, ಕಾಂಗ್ರೆಸ್ ಕೇವಲ ಒಂದು ರಾಜಕೀಯ ಪಕ್ಷವಲ್ಲ, ಅದು ಭಾರತದ ಆತ್ಮದ ಧ್ವನಿಯಾಗಿದೆ. ತಿಯೊಬ್ಬ ದುರ್ಬಲ, ಪ್ರತಿಯೊಬ್ಬ ವಂಚಿತ ಮತ್ತು ಪ್ರತಿಯೊಬ್ಬ ಶ್ರಮಜೀವಿಯೊಂದಿಗೆ ಸ್ಥಿರವಾಗಿ ನಿಲ್ಲುತ್ತದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಪ್ರತಿಯೊಬ್ಬ ಕಾಂಗ್ರೆಸ್ಸಿಗರಿಗೂ ಹೃತ್ಪೂರ್ವಕ ಶುಭಾಶಯಗಳು. ಭಾರತಕ್ಕೆ ಸ್ವಾತಂತ್ರ್ಯವನ್ನು ಗೆದ್ದುಕೊಟ್ಟ, ಸಂವಿಧಾನದ ಅಡಿಪಾಯವನ್ನು ಹಾಕಿದ, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೌಲ್ಯಗಳನ್ನು ಬಲಪಡಿಸಿದ ಆ ಐತಿಹಾಸಿಕ ಪರಂಪರೆ ಮತ್ತು ಮಹಾನ್ ತ್ಯಾಗಗಳಿಗೆ ನಾವು ಗೌರವ ಸಲ್ಲಿಸುತ್ತೇವೆ.
ದ್ವೇಷ, ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ಸತ್ಯ, ಧೈರ್ಯ ಮತ್ತು ಸಂವಿಧಾನದ ರಕ್ಷಣೆಗಾಗಿ ನಾವು ಇನ್ನಷ್ಟು ದೃಢನಿಶ್ಚಯದಿಂದ ಹೋರಾಡಲು ಸಂಕಲ್ಪಿಸುತ್ತೇವೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net