ಅಸ್ಸಾಂನಲ್ಲಿ ಬಿಜೆಪಿಗೆ 'ಹ್ಯಾಟ್ರಿಕ್' ಗೆಲುವಿನ ಗುರಿ: ಕಾಂಗ್ರೆಸ್ ಸಾಧನೆಯನ್ನು ಪುನರಾವರ್ತಿಸುತ್ತಾರೆಯೇ ಹಿಮಂತ ಬಿಸ್ವಾ ಶರ್ಮಾ?..Assam Election Results

Assam Election Results
Assam Election Results
Published on

ಪ್ರಮುಖ ಮುಖ್ಯಾಂಶಗಳು

  • ಅಸ್ಸಾಂನಲ್ಲಿ ಬಿಜೆಪಿ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕ
  • ಹಿಂದೆ ತರುಣ್ ಗೊಗೊಯ್ ನೇತೃತ್ವದಲ್ಲಿ ಮೂರು ಬಾರಿ ಗೆಲುವು ಕಂಡುಕೊಂಡಿದ್ದ ಕಾಂಗ್ರೆಸ್
  • ಹಿಮಂತ ಬಿಸ್ವಾ ಶರ್ಮಾ ಅವರ ನಾಯಕತ್ವಕ್ಕೆ ಇದು ಅಗ್ನಿಪರೀಕ್ಷೆ.
  • ಈಗಾಗಲೇ 97 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಜಯದತ್ತ ಬಿಜೆಪಿ ಮುಖಮಾಡಿದೆ.
Assam Election Results:ಅಸ್ಸಾಂ ರಾಜಕೀಯದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ಸಮರ ಕಾವೇರಿದೆ. ಈ ಹಿಂದೆ ತರುಣ್ ಗೊಗೊಯ್​ ಅವರ ನೇತೃತ್ವದಲ್ಲಿ ಕಾಂಗ್ರೆಸ್​ ಮೂರು ಬಾರಿ ಟೀ ಗಾರ್ಡನ್ ಆಫ್ ಇಂಡಿಯಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಹ್ಯಾಟ್ರಿಕ್​​ ಗೆಲುವು ಸಾಧಿಸಿತ್ತು. ಮತ್ತದೇ ಅಗ್ನಿ ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇದ್ದಾರೆ.
ಹೌದು, ಇಂದು (ಮೇ.4)ರಂದು ಅಸ್ಸಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಈಗಾಗಲೇ 97 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಮೂಲಕ ಮತ್ತೆ ಅಸ್ಸಾಂನಲ್ಲಿ ಮೂರನೇ ಬಾರಿ ಬಿಜೆಪಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.

ಮೂರು ಬಾರಿ ಗೆದ್ದಿದ್ದ ಕಾಂಗ್ರೆಸ್​​

2001, 2006, 2011ರಲ್ಲಿ ತರುಣ್ ಗೊಗೊಯ್ ಅವರ ನಾಯಕತ್ವದಲ್ಲಿ ಸತತ ಮೂರು ಬಾರಿ ಕಾಂಗ್ರೆಸ್​ ಜಯಭೇರಿ ಬಾರಿಸಿ ದಾಖಲೆ ಬರೆದಿತ್ತು. ಆಗ ಅವರ ಬೆನ್ನೆಲುಬಾಗಿದ್ದದ್ದೇ ಹಿಮಂತ ಬಿಸ್ವಾ ಶರ್ಮಾ. 2015ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ ಅವರು ಕಾಂಗ್ರೆಸ್​ ವಿರುದ್ಧ ಅಖಾಡೆಗಿಳಿದು ಸೋಲುಣಿಸಿದ್ದರು. ಇಂದು ಶರ್ಮಾ ಅವರು ಬಿಜೆಪಿಯಲ್ಲಿದ್ದು, ತಾವು ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಮಾಡಿದ ಸಾಧನೆಯನ್ನು ಈಗ ಬಿಜೆಪಿಯಲ್ಲಿ ಮಾಡಬೇಕಾದ ಸವಾಲು ಎದುರಿಸುತ್ತಿದ್ದಾರೆ.

ಮತ್ತೆ ಬಿಜೆಪಿ ಅಧಿಕಾರಕ್ಕೇರಲು ಸೆಣೆಸಾಟ

ಕಳೆದ ಎರಡು ಚುನಾವಣೆಗಳಲ್ಲಿ 2016 ಮತ್ತು 2021 ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ, 2026ರ ಚುನಾವಣೆಯಲ್ಲಿ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ. ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದಲ್ಲಿ ಕೈಗೊಂಡಿರುವ ಕಠಿಣ ನಿರ್ಧಾರಗಳು, ಅಭಿವೃದ್ಧಿ ಯೋಜನೆಗಳು ಮತ್ತು ಜನಸಂಖ್ಯಾ ನಿಯಂತ್ರಣದಂತಹ ವಿವಾದಾತ್ಮಕ ವಿಷಯಗಳು ಈ ಚುನಾವಣೆಯ ಮೇಲೆ ಭಾರಿ ಪ್ರಭಾವ ಬೀರಲಿವೆ.

ಕಾಂಗ್ರೆಸ್​​​​ ಮರಳಿ ತರಲು ಹೋರಾಟ

ಒಂದೆಡೆ ಕಾಂಗ್ರೆಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲು ಹೋರಾಡುತ್ತಿದ್ದರೆ, ಇನ್ನೊಂದೆಡೆ ಹಿಮಂತ ಬಿಸ್ವಾ ಶರ್ಮಾ ಅವರು ಬಿಜೆಪಿಯ ಅಧಿಪತ್ಯವನ್ನು ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಹಿಂದೆ ಮಾಡಿದ ಸಾಧನೆಯನ್ನು ಬಿಜೆಪಿ ಈ ಬಾರಿ ಮೆಟ್ಟಿ ನಿಲ್ಲುವುದೇ ಅಥವಾ ಕಾಂಗ್ರೆಸ್ ಬಿಜೆಪಿಯ ವಿಜಯಯಾತ್ರೆಗೆ ಬ್ರೇಕ್ ಹಾಕುವುದೇ ಎಂಬುದು ಕುತೂಹಲಕಾರಿಯಾಗಿದೆ.

ಹಿಮಂತ್​ ಬಿಸ್ವಾ ಶರ್ಮಾರಿಮದ ಕ್ರಾಂತಿಕಾರಕ ಯೋಜನೆಗಳು

ಹಿಮಂತ್​ ಬಿಸ್ವಾ ಶರ್ಮಾ ಅವರು ಅಸ್ಸಾಂಗೆ ಮೊದಲ ಬಾರಿ ಸಿಎಂ ಆದಾಗ ಅನೇಕ ಕ್ರಾಂತಿ ಕಾರಿ ಮತ್ತು ವಿವಾದಾತ್ಮಕ ನಿರ್ಧಾರಗಳನ್ನು ಜಾರಿ ಮಾಡಿದ್ದರು. ಬಾಲ್ಯ ವಿವಾಹ ತಡೆ, ಮದರಸಾಗಳ ಸುಧಾರಣೆ ಮತ್ತು ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಗಳು ಅವರಿಗೆ 'ಹಿಂದೂ ಹೃದಯ ಸಾಮ್ರಾಟ್' ಎಂಬ ಪಟ್ಟ ತಂದುಕೊಟ್ಟಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net