

ನವದೆಹಲಿ: ಚುನಾವಣೆಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷವು, ದೇಶದ ಪ್ರಜಾಪ್ರಭುತ್ವವನ್ನು ಕೊಂದಾದರೂ ಸರಿ ಅಧಿಕಾರಕ್ಕೆ ಬರಲು ಈಗ ದೃಢನಿಶ್ಚಯ ಮಾಡಿದೆ ಎಂದು ಸೋಮವಾರ(ಅ. 02) ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಸೋಮವಾರ 'ಪ್ರಜಾಪ್ರಭುತ್ವವನ್ನು ರಕ್ಷಿಸೋಣ-ಅರಾಜಕತೆಯನ್ನು ಕೊನೆಗೊಳಿಸೋಣ' ಎಂಬ ಹೆಸರಿನಲ್ಲಿ ಹೈದರಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿರುವ ಪಾದಯಾತ್ರೆಯನ್ನು ಭಾಗವಹಿಸುವ ಮುನ್ನ ಎಕ್ಸ್ನಲ್ಲಿ ಕೇಂದ್ರ ಗೃಹಸಚಿವರು ಈ ರೀತಿ ಹೇಳಿಕೆ ನೀಡಿದ್ದಾರೆ.
ಎಕ್ಸ್ ಪೋಸ್ಟ್ನಲ್ಲಿ, ಚುನಾವಣೆಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿ ಕಂಗೆಟ್ಟಿರುವ ಕಾಂಗ್ರೆಸ್, ಹೇಗಾದರೂ ಸರಿ ಅಧಿಕಾರವನ್ನು ಹಿಡಿಯಲೇಬೇಕೆಂದು ಪಣತೊಟ್ಟಿದೆ. ಇದಕ್ಕಾಗಿ ಅದು ತನ್ನ ಅರಾಜಕೀಯ ಕೃತ್ಯಗಳ ಮೂಲಕ ಪ್ರಜಾಪ್ರಭುತ್ವವನ್ನೇ ಕೊಲೆಗೈಯಲು ಕೂಡ ಹಿಂಜರಿಯುತ್ತಿಲ್ಲ.
ಕಾಂಗ್ರೆಸ್ ಪಕ್ಷದ ಇಂತಹ ದುರುದ್ದೇಶಪೂರಿತ ಪ್ರಯತ್ನಗಳಿಂದ ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಇಂದು ಸಂಜೆ ಹೈದರಾಬಾದ್‌ನಲ್ಲಿ ನಡೆಯಲಿರುವ 'ಪ್ರಜಾಪ್ರಭುತ್ವವನ್ನು ಉಳಿಸೋಣ - ಅರಾಜಕತೆಯನ್ನು ಕೊನೆಗಾಣಿಸೋಣ' ಎಂಬ ಬೃಹತ್ ಪಾದಯಾತ್ರೆಯಲ್ಲಿ ನಾನು ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).