ಪುರಸಭೆ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಅಕ್ರಂ ಷರೀಫ್ ಅವರನ್ನು ಕರವೇ(ನಾರಾಯಣಗೌಡ ಬಣ)ದ ಕಾರ್ಯಕರ್ತರು ಅಭಿನಂದಿಸಿರುವುದು.
Published on:
Copied
Follow Us
ಬೇಲೂರು: ಪುರಸಭೆ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಅಕ್ರಂ ಷರೀಫ್ ಅವರನ್ನು ಪುರಸಭೆ ಕಚೇರಿಯಲ್ಲಿ ಕರವೇ(ನಾರಾಯಣಗೌಡ ಬಣ)ದಿಂದ ಗುರುವಾರ ಅಭಿನಂದಿಸಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮುಂದಾಗುವಂತೆ ಮನವಿ ಮಾಡಿದರು.
ಕರವೇ(ನಾರಾಯಣಗೌಡ ಬಣ)ದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ವಾಣಿಜ್ಯ ಮಳಿಗೆಗಳನ್ನು ಪಾರದರ್ಶಕವಾಗಿ ಹರಾಜು ಮಾಡಲು ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ ಅವರು, ಅಭಿವೃದ್ಧಿ ಕೆಲಸಕ್ಕೆ ಸಂಘಟನೆ ಸದಾ ನಿಮ್ಮೊಂದಿಗಿರುತ್ತದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್, ಕರವೇ ಮುಖಂಡರು ನಮಗೆ ಉತ್ತಮವಾದ ಸಲಹೆ ನೀಡಿದ್ದಾರೆ. ಅದನ್ನು ಕಾರ್ಯಗತ ಗೊಳಿಸಲು ಮುಂದಾಗುತ್ತೇನೆ. ಜತೆಗೆ ಕುಡಿಯುವ ನೀರಿನ ಸಂಬಂಧ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಪ್ರತಿನಿತ್ಯ ನೀರು ಕೊಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ವಾಣಿಜ್ಯ ಮಳಿಗೆಗಳನ್ನು ಪಾರದರ್ಶಕವಾಗಿ ಹರಾಜು ಮಾಡಲಾಗುವುದು. ತಾಲೂಕು ಪಂಚಾಯಿತಿಗೆ ಹೇಗೆ ಆದಾಯ ಬಂದಿದೆಯೋ ಅದೇ ರೀತಿ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಇದರೊಂದಿಗೆ ಪಟ್ಟಣದಲ್ಲಿ ಪರ್ಮಿಷನ್ ಇಲ್ಲದೆ ಯಾರೂ ಫ್ಲೆಕ್ಸ್ ಹಾಕುವಂತಿಲ್ಲ. ಪರ್ಮಿಷನ್ ಪಡೆದವರು ಎಷ್ಟು ದಿನಕ್ಕೆ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸಿ ತೆರವಿಗೆ ಮುಂದಾಗಲಿದ್ದೇವೆ ಮತ್ತು ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರ ಮುಖ್ಯವಾಗಿದೆ ಎಂದರು.
ಕರವೇ ತಾಲೂಕು ಗೌರವಾಧ್ಯಕ್ಷ ಮಾಲೇಗೆರೆ ತಾರಾನಾಥ್, ಕೋಗಿಲಮನೆ ಕುಮಾರ್, ಉಪಾಧ್ಯಕ್ಷ ಪ್ರಸನ್ನ ಹೊಸಳ್ಳಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ನಗರಾಧ್ಯಕ್ಷ ಮೋಹನ್, ಯುವ ಘಟಕದ ಅಧ್ಯಕ್ಷ ವರುಣ್, ಉಪಾಧ್ಯಕ್ಷ ಪ್ರಗತಿ ಲೋಕೇಶ್, ಮುಖಂಡರಾದ ಧರ್ಮ, ಶ್ರೀಧರ ಸೇರಿದಂತೆ ಇತರರಿದ್ದರು.