_1785564060169.webp?w=480&auto=format%2Ccompress&fit=max)
_1785564060169.webp?w=480&auto=format%2Ccompress&fit=max)
ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮ ಆರೋಪವನ್ನು ಖಂಡಿಸಿ ಶುಕ್ರವಾರ ಸಂಸತ್ತಿನ ಆವರಣದಲ್ಲಿ ನಡೆಸಿದ ವಿಶಿಷ್ಟ ಮಾದರಿಯ ಪ್ರತಿಭಟನೆಗೆ ಸಂಬಂಧಿಸಿದಂತೆ ಪೂರ್ಣಿಯಾದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ (Pappu Yadav) ವಿರುದ್ಧ ದೆಹಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಸತ್ನಲ್ಲಿ ನಿನ್ನೆ ನಡೆದಿದ್ದೇನು..?
ಈ ಬೀದಿ ನಾಟಕದಲ್ಲಿ ಪೂರ್ಣಿಯಾ ಸಂಸದ ಪಪ್ಪು ಯಾದವ್ ಅರ್ಚಕನಂತೆ ಕೇಸರಿ ವಸ್ತ್ರ ಧರಿಸಿ, ಶ್ರೀರಾಮನ ಚಿತ್ರವನ್ನು ಹಿಡಿದು ಭಕ್ತರಿಂದ ಕಾಣಿಕೆ ಸ್ವೀಕರಿಸುವ ಪಾತ್ರ ವಹಿಸಿದ್ದರು. ನಾಟಕದ ಭಾಗವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಸಂಸದರು ಕಾಣಿಕೆ ಪೆಟ್ಟಿಗೆಗೆ ಹಣ ಹಾಕಿದರು. ಆದರೆ ಅರ್ಚಕನ ಪಾತ್ರದಲ್ಲಿದ್ದ ಪಪ್ಪು ಯಾದವ್, ಆ ಹಣವನ್ನು ಕಾಣಿಕೆ ಪೆಟ್ಟಿಗೆಗೆ ಹಾಕುವ ಬದಲು ತಮ್ಮ ಜೇಬಿಗೆ ಇಳಿಸಿಕೊಳ್ಳುವ ಮೂಲಕ ದೇಣಿಗೆ ಅಕ್ರಮವನ್ನು ಸಾಂಕೇತಿಕವಾಗಿ ಪ್ರದರ್ಶಿಸಿದರು. ಇದನ್ನು ಕಂಡ ಸಮಾಜವಾದಿ ಪಕ್ಷದ ಸಂಸದರೊಬ್ಬರು ಭಕ್ತನಾಗಿ ನಟಿಸಿ, ಆ ಅಕ್ರಮವನ್ನು ಪ್ರಶ್ನಿಸುವ ಸನ್ನಿವೇಶ ಮೂಡಿಬಂತು.
ಸ್ಪೀಕರ್ ಅಸಮಾಧಾನ ಮತ್ತು ಲೋಕಸಭಾ ಸಚಿವಾಲಯದ ಖಂಡನೆ
ಇನ್ನೊಂದೆಡೆ ವಿಪಕ್ಷಗಳ ನಡವಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ವಿರೋಧ ಪಕ್ಷಗಳ ಈ ಪ್ರತಿಭಟನೆಯು ಸನಾತನ ಧರ್ಮಕ್ಕೆ ಕಳಂಕ ತಂದಿದೆ. ಕೇವಲ ಮತಗಳಿಗಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದಂತಹ ಪಕ್ಷಗಳು ಸನಾತನ ಧರ್ಮವನ್ನು ನಿಂದಿಸುವ ಕೆಲಸ ಮಾಡುತ್ತಿರುವುದು ದೇಶದ ದೌರ್ಭಾಗ್ಯ. ಇದಕ್ಕೆ ಸನಾತನ ಧರ್ಮವೇ ತಕ್ಕ ಉತ್ತರ ನೀಡಲಿದೆ ಮತ್ತು ಈ ಅಪರಾಧವನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ