ರೇಪ್ ಬಗ್ಗೆ ಜೋಕ್ ಮಾಡಿ ವಿವಾದಕ್ಕೆ ಸಿಲುಕಿದ ಕಾಮಿಡಿಯನ್! ‘370 ರೂ. ಬಿರಿಯಾನಿ’ ವಿವಾದದ ನಡುವೆ ಮತ್ತೊಂದು ಚರ್ಚೆ | Controversy

Controversy
Controversy
Published on
ಮುಂಬೈ: ಸ್ಟ್ಯಾಂಡ್‌ಅಪ್ ಕಾಮಿಡಿ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರು ನಗುವುದು ಸಾಮಾನ್ಯ. ಆದರೆ ಕೆಲವು ಜೋಕ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ(Controversy) ತೀವ್ರ ಚರ್ಚೆಗೆ ಕಾರಣವಾಗುತ್ತವೆ. ಇದೀಗ ಕಾಮಿಡಿಯನ್ ಮಧುರ್ ವಿರ್ಲಿ ಅವರ ಹಳೆಯ ಸ್ಟ್ಯಾಂಡ್‌ಅಪ್ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿನ ರೇಪ್ ಕುರಿತ ಹೇಳಿಕೆಗಳು ಭಾರೀ ವಿವಾದ ಹುಟ್ಟುಹಾಕಿವೆ.
2024ರಲ್ಲಿ ನಡೆದ ‘ಲವ್ ಆ್ಯಂಡ್ ಲೇಟೆಕ್ಸ್’ (Love & Latex) ಕಾರ್ಯಕ್ರಮದ ಒಂದು ವಿಡಿಯೋ ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಧುರ್ ವಿರ್ಲಿ ಅತ್ಯಾಚಾರ ಪ್ರಕರಣಗಳ ಕುರಿತು ಹಾಸ್ಯ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಹೇಳಿಕೆಗಳು ಅನೇಕರಿಗೆ ಆಕ್ಷೇಪಾರ್ಹವಾಗಿ ಕಂಡಿವೆ.
ವಿಡಿಯೋ ವೈರಲ್ ಆದ ಬಳಿಕ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರವು ಕೇವಲ ಒಂದು ವಿಷಯವಲ್ಲ, ಅದು ಸಂತ್ರಸ್ತರ ಜೀವನವನ್ನೇ ಬದಲಾಯಿಸುವ ನೋವಿನ ಅನುಭವ. ಇಂತಹ ಗಂಭೀರ ವಿಷಯಗಳನ್ನು ಹಾಸ್ಯದ ವಿಷಯವಾಗಿಸುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರ, "ಇದು ಬುದ್ಧಿವಂತಿಕೆಯ ಹಾಸ್ಯವಲ್ಲ. ಸಮಾಜದಲ್ಲಿ ಈಗಾಗಲೇ ನೋವು ಅನುಭವಿಸಿರುವ ಜನರನ್ನು ಮತ್ತಷ್ಟು ನೋಯಿಸುವಂತಹ ಮಾತುಗಳು" ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು, "ಜೋಕ್‌ಗಿಂತಲೂ ಹೆಚ್ಚು ಆಶ್ಚರ್ಯವಾಗಿದ್ದು ಪ್ರೇಕ್ಷಕರ ನಗು. ಇಂತಹ ವಿಷಯಕ್ಕೆ ಜನರು ನಗುವುದು ಬೇಸರದ ಸಂಗತಿ" ಎಂದು ಪ್ರತಿಕ್ರಿಯಿಸಿದ್ದಾರೆ.
ವಿವಾದ ಹೆಚ್ಚಾದ ಬಳಿಕ ಮಧುರ್ ವಿರ್ಲಿ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿಡಿಯೋ ವೈರಲ್ ಆದ ನಂತರ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿರುವುದಾಗಿ ವರದಿಯಾಗಿದೆ. ದೆಹಲಿಯ ಮೂಲದ ಮಧುರ್ ವಿರ್ಲಿ, ಇಂಜಿನಿಯರಿಂಗ್ ಶಿಕ್ಷಣ ಪಡೆದ ನಂತರ ಕಾಮಿಡಿ ಕ್ಷೇತ್ರಕ್ಕೆ ಬಂದಿದ್ದರು.
ℹ️

ಶವದ ಖಾಸಗಿ ಅಂಗಗಳ ಸೈಜ್​​ ಬಗ್ಗೆ ಮಾತನಾಡಿದ ಸೇಜಲ್

ಈ ವಿವಾದ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೊಬ್ಬ ಕಾಮಿಡಿಯನ್ ಪ್ರಣಿತ್ ಮೋರೆ ಅವರ ಕಾರ್ಯಕ್ರಮವೂ ಚರ್ಚೆಗೆ ಕಾರಣವಾಗಿದೆ. ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಸೇಜಲ್ ಪವಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಲವು ಹೇಳಿಕೆಗಳು ವಿವಾದಕ್ಕೆ ಗುರಿಯಾಗಿವೆ.
ವೈದ್ಯಕೀಯ ಅಧ್ಯಯನದಲ್ಲಿ ಬಳಸುವ ಮೃತದೇಹಗಳ ಬಗ್ಗೆ ಅವರು ಮಾಡಿದ್ದ ಹಾಸ್ಯ ಹಲವರಿಗೆ ಅಸಮಾಧಾನ ತಂದಿದೆ. ಮೃತದೇಹ ದಾನ ಮಾಡಿದವರ ಬಗ್ಗೆ ಗೌರವ ಇಲ್ಲದ ರೀತಿಯಲ್ಲಿ ಮಾತನಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ತನಿಖೆಯೂ ಆರಂಭವಾಗಿದೆ ಎಂದು ವರದಿಯಾಗಿದೆ.

370 ರೂ. ಬಿರಿಯಾನಿ ಬದಲಾಗಿ ಹುಡುಗಿಯಿಂದ ವಸೂಲಿ!

ಇದೇ ವೇಳೆ ಪ್ರಣಿತ್ ಮೋರೆ ಕಾರ್ಯಕ್ರಮದ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದೆ. ಹಿಮಾಂಶು ಜಂಗ್ರಾ ಎಂಬ ವ್ಯಕ್ತಿ ತನ್ನ ಡೇಟಿಂಗ್ ಅನುಭವದ ಬಗ್ಗೆ ಮಾತನಾಡುತ್ತಾ, ಒಬ್ಬ ಮಹಿಳೆಗೆ ಬಿರಿಯಾನಿ ಖರೀದಿಸಲು 370 ರೂಪಾಯಿ ಖರ್ಚು ಮಾಡಿದ ನಂತರ ಆ ಹಣವನ್ನು "ವಸೂಲಿ" ಮಾಡಬೇಕೆಂದು ಯೋಚಿಸಿದ್ದೆ ಎಂದು ಹೇಳಿದ್ದರು.
ಈ ಹೇಳಿಕೆಯನ್ನು ಹಲವರು ಮಹಿಳೆಯರ ಬಗ್ಗೆ ಅವಹೇಳನಕಾರಿ ಮನೋಭಾವ ಎಂದು ಟೀಕಿಸಿದ್ದಾರೆ. ಒಬ್ಬರ ಮೇಲೆ ಹಣ ಖರ್ಚು ಮಾಡಿದ ಮಾತ್ರಕ್ಕೆ ಯಾವುದೇ ಹಕ್ಕು ಸಿಗುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.ಈ ಎಲ್ಲ ಘಟನೆಗಳ ಬಳಿಕ ಕಾಮಿಡಿಯಲ್ಲಿ ಯಾವ ವಿಷಯದವರೆಗೆ ಹಾಸ್ಯ ಮಾಡಬಹುದು? ಯಾವ ವಿಷಯಗಳನ್ನು ಮಿತಿ ದಾಟಿದ ಹಾಸ್ಯ ಎಂದು ಪರಿಗಣಿಸಬೇಕು? ಎಂಬ ಚರ್ಚೆ ದೇಶಾದ್ಯಂತ ಮತ್ತೆ ಶುರುವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net