ಆರ್ಜೆಡಿ, ಕಾಂಗ್ರೆಸ್ ಮುಸ್ಲಿಂ&ಯಾದವ ಜೊತೆಗೂಡಿಸುವ ಕುತಂತ್ರ ಮಾಡಿದರೆ, ಬಿಜೆಪಿ ಮೌನವಾಗಿ ದಶಕಗಳಿಂದಲೂ ಆಳುವ ಮಂದಿ ಕಣ್ಣಾಡಿಸದ, ಸೌಲಭ್ಯವಂಚಿತ, ದಮನಿತ ಸಮುದಾಯಗಳಾದ ನಿಶಾದ್, ತೆಲಿ, ಚೌರಾಸಿಯಾ, ಮಾಳ್ಳಾ, ಕುಂಭಾರ, ನೊನಿಯಾ, ಪಾರ್ಸಿ, ಇಬಿಸಿಗಳು, ಮಹಾದಲಿತರು ಸೇರಿದಂತೆ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿತು. ಪರಿಣಾಮ, ತಲೆತಲಾಂತರದಿಂದ ಮೆರೆಯುತ್ತಿದ್ದ ಜಾತಿದರ್ಪದ ಕೋಟೆ ಕುಸಿದು ನೆಲಸಮ ಆಯಿತು. ಇದು ಕೇವಲ ಚುನಾವಣೆ ಗೆಲುವಲ್ಲ, ಜಾತಿ ಆಧಾರಿತ ರಾಜಕೀಯ ಕುಸಂಸತಿಯ ನಾಶ!