ಲವರ್​ಗೆ ಗಿಫ್ಟ್​ ಕೊಡಿಸಲು ಚಿನ್ನದ ನೆಕ್ಲೆಸ್ ಲೂಟಿ​! ಖಾಕಿ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟ ಕಾಲೇಜು ವಿದ್ಯಾರ್ಥಿನಿ | Gold Necklace

ಲವರ್​ಗೆ ಗಿಫ್ಟ್​ ಕೊಡಿಸಲು ಚಿನ್ನದ ನೆಕ್ಲೆಸ್ ಲೂಟಿ
ಲವರ್​ಗೆ ಗಿಫ್ಟ್​ ಕೊಡಿಸಲು ಚಿನ್ನದ ನೆಕ್ಲೆಸ್ ಲೂಟಿ
Published on: 

ಪ್ರಮುಖ ಮುಖ್ಯಾಂಶಗಳು

  • ತಂದೆಯ ಸ್ನೇಹಿತರೊಬ್ಬರ ಮನೆಯಿಂದ 72 ಗ್ರಾಂ ಚಿನ್ನವನ್ನು ಲವರ್​ಗಾಗಿ ಲೂಟಿ
  • ಖಾಕಿ ವಿಚಾರಣೆಯಲ್ಲಿ ಪ್ರೇಮಿಗೆ ಗಿಫ್ಟ್​ ಕೊಡಿಸಲು ಕಳ್ಳತನ ಮಾಡಿದ್ದಾಗಿ ಸತ್ಯ ಕಕ್ಕಿದ ಯುವತಿ
ಪೊಳ್ಳಾಚಿ: ತಂದೆಯ ಸ್ನೇಹಿತರೊಬ್ಬರ ಮನೆಯಿಂದ 72 ಗ್ರಾಂ ಚಿನ್ನವನ್ನು ಲವರ್​ಗಾಗಿ ಲೂಟಿ ಹೊಡೆದ ಯುವ ಪ್ರೇಮಿಯನ್ನು ಇದೀಗ ತಮಿಳುನಾಡಿನ ಪೊಳ್ಳಾಚಿ ಪೊಲೀಸರು ಕಳ್ಳತನದ ಕೇಸ್​ನಡಿ ಬಂಧಿಸಿದ್ದಾರೆ.
ಪೊಳ್ಳಾಚಿ ಬಳಿಯ ಸಂಗಂಪಲಯಂನಲ್ಲಿ ಈ ಘಟನೆ ವರದಿಯಾಗಿದ್ದು, ಪೊಲೀಸರು ಆರೋಪಿ ಯುವತಿಯ ಗೆಳೆಯನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ನಗರದಲ್ಲಿ ದ್ವಿತೀಯ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ಬಂಧಿಸಿರುವ ಪೊಲೀಸರು, ಕಳೆದ ತಿಂಗಳ 16ರಂದು ಉಂಜಾವೇಲಂಪಟ್ಟಿಯಲ್ಲಿರುವ ತನ್ನ ತಂದೆಯ ಸ್ನೇಹಿತ ತಮಿಳುಶೆಲ್ವನ್ ಅವರ ಮನೆಯಲ್ಲಿ ಕಳ್ಳತನ ಮಾಡಿರುವುದು ದೃಢವಾದ ಬಳಿಕವೇ ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. 
ಯುವತಿ ಮನೆಗೆ ಬಂದು ಹೋದ ಮರುದಿನವೇ ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ಚಿನ್ನದ ನೆಕ್ಲೆಸ್​ ಕಾಣೆಯಾಗಿದೆ ಎಂದು ತಮಿಳಿಶೆಲ್ವನ್​  ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕಪಾಟಿನಲ್ಲಿ ಇಟ್ಟಿದ್ದ ಚಿನ್ನವನ್ನು ಕದ್ದು, 2.5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಗಿ ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ. ಮಕಿನಂಪಟ್ಟಿ ಮೂಲದ ಪ್ರೇಮಿ ಜನಕನ್ ಶಿವನಿಗೆ ಹೊಸ ಬೈಕ್​ ಕೊಡಿಸಲು ಈ ಹಣವನ್ನು ಬಳಸಿಕೊಂಡೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ,(ಏಜೆನ್ಸೀಸ್). 

Related Stories

ಯುಎನ್‌ನಲ್ಲಿ ಪಾಕಿ ಪ್ರಧಾನಿಯ ಬೆವರಿಳಿಸಿದ ಭಾರತೀಯ ರಾಯಭಾರಿ!
ಪ್ರಧಾನಿ ನರೇಂದ್ರ ಮೋದಿ ಜೊತೆ ಕ್ಯಾಪ್ಟನ್ ಅಮರೀಂದರ್ ಸಿಂಗ್
ಪ್ರಶಾಂತ್ ಕಿಶೋರ್‌ಗೆ ಬಿಗ್​ ಶಾಕ್: ಟಿಕೆಟ್ ಸಿಕ್ಕ 24 ಗಂಟೆಯಲ್ಲೇ ಜನ ಸುರಾಜ್‌ಗೆ ಗುಡ್​ ಬೈ ಎಂದ ಅಭ್ಯರ್ಥಿ!..
ಜೆನ್​-ಜೀ ಜೊತೆ ಭಜನ್ ಕ್ಲಬ್ಬಿಂಗ್​ಗೆ ಹಾಜರಾದ ನಮೋ!
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net