Mumbai ಫೈವ್​ ಸ್ಟಾರ್ ಹೋಟೆಲ್​ಗೆ ಕರೆಯದಿದ್ರು ಊಟಕ್ಕೆ ಬಂತು; ಟೇಬಲ್ ಮೇಲೆ ಜಿರಳೆ ಮರಿ ಓಡಾಟ, ವೈದ್ಯನ ಟ್ವೀಟ್ ವೈರಲ್!

Cockroach Joins Cardiologist For Dinner At JW Marriott
Cockroach Joins Cardiologist For Dinner At JW Marriott
Published on

Cockroach Joins Cardiologist For Dinner At JW Marriott: ದೇಶದ ಹೆಸರಾಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಮುಂಬೈನ ಜೆಡಬ್ಲ್ಯೂ ಮೇರಿಯಟ್ ರೆಸ್ಟೋರೆಂಟ್​ನಲ್ಲಿ ಜಿರಳೆ ಮರಿ ಕಾಣಿಸಿಕೊಂಡಿದೆ. ಈ ಬಗ್ಗೆ ಖ್ಯಾತ ಹೃದ್ರೋಗ ತಜ್ಞ ಮತ್ತು ಫೋರ್ಟಿಸ್ ಹೆಲ್ತ್‌ಕೇರ್ ಅಧ್ಯಕ್ಷರಾದ ಡಾ. ಅಶೋಕ್ ಸೇಠ್​ ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ದುಬಾರಿ ಹೋಟೆಲ್​ಗಳಲ್ಲಿ ಸ್ವಚ್ಛತೆ ಬಗ್ಗೆ ಕಳವಳವನ್ನು ಹುಟ್ಟುಹಾಕುವಂತೆ ಮಾಡಿದೆ.

ಮುಂಬೈನ ಎಫ್​ಡಿಎ ಅಧಿಕಾರಿ ತುಕರಾಮ್​ ಮುಂಢೆ ಅವರು ಆಹಾರ ಮಳಿಗೆ, ಔಷಧ ದಂಧೆ, ಹಾಲಿನ ದಂಧೆ ಹಾಗೂ ಹೋಟೆಲ್​ಗಳ ಮೇಲೆ ದಿಢೀರ್​ ದಾಳಿಮಾಡಿ ಹಲವು ಪ್ರಕರಣವನ್ನು ಬಯಲಿಗೆ ಎಳೆದಿದ್ದರು. ಇಷ್ಟಾದರೂ ಸಹ ಪಂಚತಾರ ಹೋಟೆಲ್​ಗಳಲ್ಲಿ ಸ್ವಚ್ಛತೆ ಕಾಣಿಸದ ಬಗ್ಗೆ ವೈದ್ಯರು ಉಲ್ಲೇಖಿಸಿದ್ದಾರೆ. ಅಲ್ಲದೇ, ಈ ಪೋಸ್ಟ್‌ನಲ್ಲಿ ಮುಂಢೆ, ಎಫ್‌ಎಸ್‌ಎಸ್‌ಎಐ (FSSAI) ಹಾಗೂ ಜೆಡಬ್ಲ್ಯೂ ಮೇರಿಯಟ್ ಹೋಟೆಲ್ ಅನ್ನು ಟ್ಯಾಗ್ ಮಾಡಿದ್ದಾರೆ.

ಎಕ್ಸ್​ನಲ್ಲಿ ಪೋಸ್ಟ್

ವೈದ್ಯ ಅಶೋಕ್​ ಸೇಠ್​ ಅವರು ಮುಂಬೈನ ಜೆಡಬ್ಲ್ಯೂ ಮೇರಿಯಟ್ ಹೋಟೆಲ್​ಗೆ ಊಟಕ್ಕೆ ತೆರಳಿದ್ದರು. ಅವರ ಮೇಜಿನ ಮೇಲೆ ಜಿರಳೆ ಕಾಣಿಸಿಕೊಂಡಿದೆ. ಅದು ಮನುಬುಕ್​, ಪ್ಲೇಟ್​, ಗ್ಲಾಸ್ ಸೇರಿದಂತೆ ಇಡೀ ಮೇಜಿನಸುತ್ತು ಸುತ್ತ ಓಡಾಡುತ್ತಿರುವುದನ್ನು ಗಮನಿಸಿದರು.

ಊಟಕ್ಕೆ ಬಂದಿತ್ತು

ನಮ್ಮ ರಾತ್ರಿ ಊಟವನ್ನು ಹಂಚಿಕೊಳ್ಳಲು ಅತಿಥಿಯಾಗಿ 'ರೋಚಿ' ಎಂಬ ಹೆಸರಿನ ಪುಟ್ಟ ಜಿರಳೆ ನಮ್ಮ ಮೇಜಿನ ಬಳಿಗೆ ಅನಿರೀಕ್ಷಿತವಾಗಿ ಬಂದಿತ್ತು. ನಾವು ಎಷ್ಟೇ ಬಲವಂತವಾಗಿ ಬೇಡ ಎಂದರೂ ಆ ಜಿರಳೆ ಅಲ್ಲಿಂದ ಹೋಗಲು ಒಪ್ಪಲಿಲ್ಲ. ಬಹುಶಃ ಅದಕ್ಕೆ ಪಾಸ್ತಾ ಬದಲು ಪಿಜ್ಜಾ ಬೇಕಿತ್ತೇನೋ" ಎಂದು ಡಾ. ಸೇಠ್ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ. ಸದ್ಯ ನಾವು ಐಎಸ್​ ಅಧಿಕಾರಿ ತುಕರಾಂ ಮುಂಢೆ ಅವರ ಆಡಳಿತದ ವ್ಯಾಪ್ತಿಯಲ್ಲಿದ್ದೇವೆ. ಈ ಬಗ್ಗೆ ಗಮನ ಹರಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.
ಹೋಟೆಲ್​ ಪ್ರತಿಕ್ರಿಯೆ
ಅಶೋಕ್​ ಅವರೇ ನಮಗೆ ತಿಳಿಸಿದ್ದಕ್ಕೆ ಧನ್ಯವಾದ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಪರಿಶೀಲನೆ ನಡೆಸುತ್ತೇವೆ. ದಯವಿಟ್ಟು ನಿಮ್ಮ ಮೊದಲ ಹೆಸರು, ನಿಮ್ಮ ಮೊಬೈಲ್​ ಸಂಖ್ಯೆಯನ್ನು ನಮಗೆ DM ಮಾಡಬಹುದೇ? ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಪ್ರದೀಪ್​ಕೆ ಎಂಬುವವರು ಕಾಮೆಂಟ್ ಮಾಡಿದ್ದು, ಭಾರತದಲ್ಲಿ ನೈರ್ಮಲ್ಯ ಯಾವಾಗಲೂ ಕೊನೆಯ ಆದ್ಯತೆಯಾಗಿದೆ ಏಕೆ ! ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net