ಜೂ.6ಕ್ಕೆ Cockroach Janta Party ಸಂಸ್ಥಾಪಕ ಭಾರತಕ್ಕೆ ವಾಪಸ್; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ ಶಾಂತಿಯುತ ಪ್ರತಿಭಟನೆಗೆ ಕರೆ

Abhijeet Dipke Jantar Mantar protest
Abhijeet Dipke Jantar Mantar protest
Published on

ಪ್ರಮುಖ ಮುಖ್ಯಾಂಶಗಳು

  • ಜೂನ್​ 6ಕ್ಕೆ ಭಾರತಕ್ಕೆ ಬರಲಿರುವ ಕಾಕ್ರೋಚ್​​ ಜನತಾ ಪಾರ್ಟಿ(ಸಿಜೆಪಿ)ಯ ಸಂಸ್ಥಾಪಕ
  • ಧರ್ಮೇಂದ್ರ ಪ್ರಧಾನ್ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಕರೆಕೊಟ್ಟ ಅಭಿಜಿತ್ ದೀಪ್ಕೆ
  • ದೆಹಲಿ ವಿಮಾನ ನಿಲ್ದಾಣದಲ್ಲಿ ಬರಲು ಮನವಿ ಮಾಡಿಕೊಂಡ ಅಭಿಜಿತ್ ದೀಪ್ಕೆ
ನವದೆಹಲಿ: ಕಾಕ್ರೋಚ್​​  ಜನತಾ ಪಾರ್ಟಿ(ಸಿಜೆಪಿ)ಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಜೂನ್​.6ರಂದು ವಿದೇಶದಿಂದ ಭಾರತಕ್ಕೆ ಮರಳಲಿದ್ದು, ಪರೀಕ್ಷಾ ಅಕ್ರಮಗಳ ಹೊಣೆಯೊತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸುವ ಬಗ್ಗೆ ಎಕ್ಸ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 
ನೀಟ್​ ಮತ್ತು ಸಿಬಿಎಸ್ಸಿ ಸೇರಿದಂತೆ ಹಲವು ಪ್ರಮುಖ ಪರೀಕ್ಷೆಗಳಲ್ಲಿ ಅಕ್ರಮ ಕಂಡು ಬಂದ ಹಿನ್ನೆಲೆ, ಶಿಕ್ಷಣ ಇಲಾಖೆಯ ವೈಫಲ್ಯದ ಹೊಣೆಯನ್ನು ಹೊತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ದೆಹಲಿ ವಿಮಾನ ನಿಲ್ದಾಣದಿಂದ ಅಭಿಜೀತ್​ ದೀಪ್ಕೆ ಅವರಿಗೆ ಸಾಥ್​ ನೀಡುವಂತೆ ಬೆಂಬಲವನ್ನು ಕೋರಿದ್ದಾರೆ. 

ಅಭಿಜಿತ್​ ದೀಪ್ಕೆ ಭಾರತಕ್ಕೆ ವಾಪಸ್

'ಭಾರತದ ಸಂವಿಧಾನದ ಅನುಸಾರ ನಾವು ಒಟ್ಟಾಗಿ ಸೇರಿ ಧರ್ಮೇಂದ್ರ ಪ್ರಧಾನ್​ ಅವರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಸಮಯ ಬಂದಿದೆ. ನಾವು ಒಗ್ಗಟ್ಟಾಗಿ ನಿಂತು ಹೋರಾಡಿದರೆ ಖಂಡಿತ ಅವರು ನಮ್ಮ ಮಾತನ್ನು ಕೇಳುತ್ತಾರೆ' ಎಂದರು. 
ಜೂನ್​.6ರಂದು ದೆಹಲಿಯ ಜಂತರ್​ ಮಂತರ್​ ಬಳಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಶಾಂತಿಯುತ ಪ್ರತಿಭಟನೆ ನಡೆಸೋಣ ಎಂದು  ಇನ್​​ಸ್ಟಾಗ್ರಾಮ್​ ಹಾಗೂ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರತಿಭಟನೆಯಲ್ಲಿ ಭಾಗಿಯಾಗಲು ಬೆಂಬಲಿಗರು ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ನಾನು ಜೂನ್​.6ರ ಬೆಳಿಗ್ಗೆ ದೆಹಲಿಯಲ್ಲಿರುತ್ತೇನೆ. ದಯವಿಟ್ಟು ವಿಮಾನ ನಿಲ್ದಾಣದಲ್ಲಿ ಬೆಂಬಲಿಗರು, ವಿದ್ಯಾರ್ಥಿಗಳು ಅಲ್ಲಿ  ಒಟ್ಟಾಗಿ ಸೇರಿದ ನಂತರ, ಶಾಂತಿಯುತವಾಗಿ ಸೇರಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ,  ಜಂತರ್​ ಮಂತರ್​​ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅಧಿಕೃತವಾಗಿ ಮನವಿ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ. ಪರೀಕ್ಷಾ ಅಕ್ರಮಗಳು ಮತ್ತು ವಿಳಂಬ ನೀತಿಗಳಿಂದ ಕೋಟ್ಯಂತರ ವಿದ್ಯಾರ್ಥಿಗಳು ಭವಿಷ್ಯದ ಆತಂಕದಲ್ಲಿದ್ದು, ಸರ್ಕಾರದಿಂದ ಹೊಣೆಗಾರಿಕೆಯನ್ನು ಈ ಪ್ರತಿಭಟನೆ ಪ್ರಶ್ನಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಏನಿದು ಸಿಜೆಪಿ?

ವಿಚಾರಣೆಯೊಂದರ ಸಮಯದಲ್ಲಿ ನ್ಯಾಯಾಧೀಶರಾದ ಸೂರ್ಯಕಾಂತ್​ ಅವರು, ನಿರುದ್ಯೋಗಿಗಳು ಜಿರಳೆಗಳಿದ್ದಂತೆ ಎಂದಿದ್ದರು ಇದನ್ನೇ ಗುರಿಯಾಗಿಸಿಕೊಂಡ ಅಭಿಜೀತ್​ ದೀಪ್ಕೆ ಹೌದು ನಾವು ಸೋಮಾರಿಗಳು, ಆನ್​ಲೈನ್​ನಲ್ಲಿ ದಿನ ಕಳೆಯುವವರು, ನಿರುದ್ಯೋಗಿಗಳು ಎಂದು ಸಿಜೆಪಿ  ಪಾರ್ಟಿ ಶುರು ಮಾಡಿದರು. ಸದ್ಯ ಈ ಪಾರ್ಟಿಗೆ ರಾಜಕೀಯ ನಾಯಕರು, ವಿದ್ಯಾರ್ಥಿಗಳು ಬೆಂಬಲ ಸೂಚಿಸಿದ್ದಾರೆ.(ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net