CJP Delhi Protest: 'ಅಂಬೇಡ್ಕರ್​ರ ಮೈ ಆಟೋಬಯೋಗ್ರಫಿ'​ ಪುಸ್ತಕ ಹಿಡಿದು ದೆಹಲಿಗೆ ಎಂಟ್ರಿ ಕೊಟ್ಟ ಜಿರಳೆ ಪಕ್ಷದ ನಾಯಕ ಅಭಿಜಿತ್​ ದೀಪ್ಕೆ

Cockroach Janta Party protest Delhi
Cockroach Janta Party protest Delhi
Published on
ನವದೆಹಲಿ: ಜೂನ್.6ರಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ, ನೀಟ್​​ ಸೇರಿದಂತೆ ಪ್ರತಿಷ್ಠಿತ ಪರೀಕ್ಷೆಗಳ್ಳಲ್ಲಾದ ಲೋಪದ ವಿರುದ್ಧ ಹೋರಾಡಲು ಸಾಥ್​ ನೀಡುವಂತೆ ಕರೆ ನೀಡಿದ್ದ ಕಾಕ್ರೋಚ್​ ಜನತಾ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಅಮೆರಿಕದಿಂದ ದೆಹಲಿಗೆ ಕಾಲಿಟ್ಟಿದ್ದಾರೆ.
 ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಭದ್ರತೆಯೊಂದಿಗೆ ಆಚೆ ಕಾಲಿಡುತ್ತಲೇ ಅಭಿಜಿತ್​ ದೀಪ್ಕೆ ಅವರು, ಡಾ ಬಿಆರ್​ ಅಂಬೇಡ್ಕರ್​ ಅವರ ಮೈ ಆಟೋಗ್ರಾಫ್​  ಪುಸ್ತಕವನ್ನು ಹಿಡಿದು, ಕ್ಯಾಪ್​ ಧರಿಸಿ, ಕಪ್ಪು ಬಣ್ಣದ ಜೆರ್ಸಿ, ಬಿಳಿ ಶರ್ಟ್​ ಹಿಡಿದು ಏರ್ಪೋರ್ಟ್​ಗೆ ಎಂಟ್ರಿ ಕೊಟ್ಟರು, ಹಲವರು ಅವರ ಹೆಸರು ಉದ್ಘರಿಸಿದರೆ, ಇನ್ನು ಕೆಲವರು ವಿಡಿಯೋಗಳನ್ನು ಸೆರೆಹಿಡಿದರು. 

ಜಂತರ್​ ಮಂತರ್​ ಬಳಿ ಹೆಚ್ಚಿದ ಭದ್ರತೆ

 ಈಗಾಗಲೇ ಜಂತರ್​ ಮಂತರ್​ ಬಳಿ ಹಾಗೂ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.  ನವದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ 1,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 
ಪ್ರತಿಭಟನೆಗೆ ಬಹುತೇಕ ಅಸ್ತು ಎನ್ನುವ ಕಾರಣ ಯುವ ಸಮುದಾಯ ಮತ್ತು  Gen-Zಗಳು ಹೆಚ್ಚಾಗಿ ಜಮಾಯಿಸುವ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ನಿಗಾವಹಿಸಿದ್ದಾರೆ. ಪ್ರತಿಭಟನಾಕಾರರು ರಾಷ್ಟ್ರಧ್ವಜ ಹಾಗೂ ಪುಸ್ತಕಗಳನ್ನು ಕೈಯಲ್ಲಿ ಹಿಡಿದು, ಶಾಂತಿಯುತವಾಗಿ ಸಂವಿಧಾನದ ಪುಸ್ತಕ ಹಿಡಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಸೋನಮ್ ವಾಂಗ್ಚುಕ್  ಬೆಂಬಲ

ಜೂನ್ 5 ರೊಳಗೆ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡದಿದ್ದರೆ  ಪ್ರತಿಭಟನೆಯಲ್ಲಿ ನಾನು ಭಾಗಿಯಾಗಿ ಬೆಂಬಲ ನೀಡುತ್ತೇನೆ ಎಂದು ಶಿಕ್ಷಣ ಸುಧಾರಕ ಹಾಗೂ ಪ್ರಸಿದ್ಧ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಹೇಳಿದ್ದರು. ನೀರಿನ ಬಾಟಲಿಗಳು ಮತ್ತು ಮೊಬೈಲ್ ಫೋನ್‌ಗಳಂತಹ ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯಲು ಅವರು ಪ್ರತಿಭಟನಾಕಾರರಿಗೆ ಸಲಹೆ ನೀಡಿದರು. ಅನುಮಾನಸ್ಪದವಾಗಿ ಜನರು ಕಂಡರೆ ಅಥವಾ ಶಸ್ತ್ರಾಸ್ತ್ರ ಹಿಡಿದಿರುವುದು ಕಂಡರೆ ಕೂಡಲೇ ದೂರು ನೀಡಿ ಎಂದು ಕರೆ ನೀಡಿದರು. 

ಪ್ರತಿಭಟನೆ ಯಾಕೆ?

ನೀಟ್​, ಸಿಬಿಎಸ್​​ಸಿ ಸೇರಿದಂತೆ ಪ್ರತಿಷ್ಠಿತ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ,  ಶಿಕ್ಷಣ ಇಲಾಖೆಯಲ್ಲಿ ಮರುಕಳಿಸುತ್ತಿರುವ ಲೋಪವನ್ನು ಉಲ್ಲೇಖಿಸಿ,  ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆಗೆ ಆಗ್ರಹಿಸಲು ಹೋರಾಡುವಂತೆ ಕರೆ ನೀಡಿದ್ದರು. ಒಂಟಿಯಾಗಿ ಹೋರಾಡುವವರ ಮಾತು ಕೇಳಲ್ಲ. ಆದರೆ, ಒಗ್ಗಟ್ಟಾಗಿ ಪ್ರತಿಭಟಿಸಿದರೆ ಖಂಡಿತ ಅವರು ರಾಜೀನಾಮೆ ನೀಡುತ್ತಾರೆ ಎಂದು ಅಭಿಜಿತ್​ ದೀಪ್ಕೆ ಕರೆ ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net