ಜೂ. 6 ಕ್ಕೆ CJP ಧರಣಿ: ಇಷ್ಟು ದಿನ ಸುಮ್ಮನಿದ್ದದ್ದು ಸಾಕು, ಭಾರತವನ್ನು ನೇಪಾಳ ಮಾಡೋಣ; ಕಾಕ್ರೋಚ್ ಜನತಾ ಪಾರ್ಟಿ ಬೆಂಬಲಿಗನ ವಿಡಿಯೋ ವೈರಲ್​! Cockroach Janata Party

ಭಾರತವನ್ನು ನೇಪಾಳ ಮಾಡುತ್ತೇವೆ, ದೊಣ್ಣೆ ಪೆಪ್ಪರ್​ ಸ್ಪ್ರೇ ತೆಗೆದುಕೊಂಡು ಬನ್ನಿ
ಭಾರತವನ್ನು ನೇಪಾಳ ಮಾಡುತ್ತೇವೆ, ದೊಣ್ಣೆ ಪೆಪ್ಪರ್​ ಸ್ಪ್ರೇ ತೆಗೆದುಕೊಂಡು ಬನ್ನಿ
Published on

ಪ್ರಮುಖ ಮುಖ್ಯಾಂಶಗಳು

  • ಜೂನ್​ 6 ಕ್ಕೆ ಕಾಕ್ರೋಚ್​ ಜನತಾ ಪಾರ್ಟಿತಿಂದ ಧರಣಿ
  • ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಧರಣಿ
  • ಪ್ರತಿಭಟನೆಗೆ ಮುನ್ನ CJP ಕಾರ್ಯಕರ್ತನ ವಿಡಿಯೋ ವೈರಲ್​​
  • ಭಾರತವನ್ನು ನೇಪಾಳ ಮಾಡುತ್ತೇವೆ, ದೊಣ್ಣೆ ಪೆಪ್ಪರ್​ ಸ್ಪ್ರೇ ತೆಗೆದುಕೊಂಡು ಬನ್ನಿ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ನವದೆಹಲಿ: ಸೋಷಿಯಲ್​ ಮೀಡಿಯಾ ಟ್ರೆಡಿಂಗ್​ ಟಾಪಿಕ್​ ಆಗಿರುವ ಕಾಕ್ರೋಚ್​ ಜನತಾ ಪಾರ್ಟಿ (Cockroach Janata Party) ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ವಿರೋಧಿಸಿ ಶನಿವಾರ (ಜೂನ್​.6) ಜಂತರ್​ ಮಂತರ್​ನಲ್ಲಿ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಕೋರಿ ಧರಳಿ ನಡೆಸಲು ಮುಂದಾಗಿದೆ.
ಈ ಧರಣಿಗೆ ಕಾಕ್ರೋಚ್​ ಜನತಾ ಪಾರ್ಟಿಯ ಸ್ಥಾಪಕ ಅಭಿಜೀತ್​ ದಿಪ್ಕೆ ಕೂಡ ಆಗಮಿಸಲಿದ್ದು, ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಕಾಕ್ರೋಚ್​ ಪಕ್ಷದ ಬೆಂಬಲಿಗನೆಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ನಾವು ಭಾರತವನ್ನು ನೇಪಾಳವನ್ನಾಗಿ ಪರಿವರ್ತಿಸುತ್ತೆವೆಂದು ಹಂಚಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ.

ದೊಣ್ಣೆ, ಪೆಪ್ಪರ್​ ಸ್ಪ್ರೇ ನಿಮ್ಮ ಕೈಲಿರಲಿ!

ಅಮಿತ್​ ಕುಮಾರ್​ ಸಿಂಧಿ ಎಂಬ ಎಕ್ಸ್​ (ಟ್ವಿಟರ್​) ಖಾತೆಯಿಂದ ಹಂಚಿಕೆಯಾಗಿರುವ ವಿಡಿಯೋನಲ್ಲಿ, ಜೂನ್​ 6 ರಂದು ನಾವು ಧರಣಿ ನಡೆಸಲಿದ್ದವೆ. ಈ ಪ್ರತಿಭಟನೆಗೆ ಅಭಿಜೀತ್​ ದಿಪ್ಕೆ ಬರುತ್ತಿದ್ದಾರೆ. ಅವರನ್ನು ವಿಮಾನನಿಲ್ದಾಣದಲ್ಲಿಯೇ ತಡೆಯುವ ಯೋಜನೆ ನಡೆಯುತ್ತಿದೆ.
ಹೀಗಾಗಿ ಪ್ರತಿಭಟನೆಗೆ ಬರುವ ಜನ ಕೈಯಲ್ಲಿ ದೊಣ್ಣೆ ಮತ್ತು ಪೆಪ್ಪರ್​ ಸ್ಪ್ರೇಯನ್ನು ತೆಗೆದುಕೊಂಡು ಬನ್ನಿ, ನಾವು ಭಾರತದವನ್ನು ನೇಪಾಳವನ್ನಾಗಿ ಪರಿವರ್ತಿಸಬೇಕು, ನಾವು ವಿಮಾನ ನಿಲ್ದಾಣವನ್ನು ಧ್ವಂಸಗೊಳಿಸಬೇಕೆಂದು ಹೇಳಿದ್ದಾರೆ.

ಕಾಕ್ರೋಚ್​ ಜನತಾ ಪಕ್ಷಕ್ಕೆ ವಕ್ತಾರರ ನೇಮಕ

ಬುಧವಾರ (ಜೂ.3) ಈ ಪಾರ್ಟಿ ಮೂವರು ಪ್ರಮುಖ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳನ್ನು (Influencers) ತನ್ನ ಅಧಿಕೃತ ವಕ್ತಾರರನ್ನಾಗಿ ಘೋಷಿಸಿದೆ. ಈ ವಿಷಯವನ್ನು ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಿಳಿಸಿದ್ದಾರೆ.
ತನಿಖಾ ಪರ್ತಕರ್ತ ಸೌರವ್ ದಾಸ್, ಲೇಖಕ ವಿಜೇತಾ ದಹಿಯಾ ಹಾಗೂ ಐಐಟಿ ಕಾನ್ಪುರ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಹಳೆಯ ವಿದ್ಯಾರ್ಥಿ ಅಶುತೋಷ್ ರಂಕಾ ಅವರನ್ನು ಕಾಕ್ರೋಚ್​ ಜನತಾ ಪಾರ್ಟಿಯ ವಕ್ತಾರರಾಗಿ ನೇಮಿಸಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net