

ನವದೆಹಲಿ: ಕೇವಲ ಭಾರತ ಮಾತ್ರವಲ್ಲದೇ ಜಗತ್ತಿಗೆ ಬೇಕಾಗಿರುವ ಮೋಸ್ಟ್ ವಾಂಟೆಂಡ್ ಭಯೋತ್ಪಾದಕ ಎಂದರೆ ಅದು ದಾವೂದ್ ಇಬ್ರಾಹಿಂ. 1993 ರಲ್ಲಿ ಬಾಂಬೆ (ಇಂದಿನ ಮುಂಬೈ) ನಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ಭಾರತಕ್ಕೆ ಮತ್ತೆ ಕಾಲಿಡದ ಇವನ ವಿರುದ್ಧ ಇಂಟರ್ನ್ಯಾಷನಲ್ ಪೊಲೀಸ್ (ಇಂಟರ್ಪೊಲ್) ರೆಡ್ ಕಾರ್ನರ್ ನೋಟಿಸ್ ಅನ್ನು ಕೂಡ ಜಾರಿ ಮಾಡಿದೆ.
ಆದರೆ, ಈ ಭೂಗತ ಪಾತಕಿ ಎಲ್ಲಿದ್ದಾನೆ? ಎಂಬುದಕ್ಕೆ ಇಲ್ಲಿವರೆಗೆ ಸ್ಪಷ್ಟ ಉತ್ತರವಿಲ್ಲ. ಭಾರತೀಯ ಗುಪ್ತಚರ ಮಾಹಿತಿ ಪ್ರಕಾರ, ದಾವೂದ್ ಪಾಕಿಸ್ತಾನದಲ್ಲಿಯೇ ಅಡಗಿ ಕುಳಿತಿದ್ದಾನೆಂದು ಹೇಳುತ್ತಿದ್ದರೂ ಪಾಕಿಸ್ತಾನ ಮಾತ್ರ ತನ್ನ ನೆಲದಲ್ಲಿ ಯಾವುದೇ ಭಯೋತ್ಪಾದಕ ಎಲ್ಲವೆಂದೇ ವಾದ ಮಾಡುತ್ತಾ ಬಂದಿದೆ.
ಆದರೆ, ಈದೀಗ ಅಮೆರಿಕದ ಗುಪ್ತಚರ ಇಲಾಖೆ (FBI) ಯ ಮಾಜಿ ಅಧಿಕಾರಿಯೊಬ್ಬರು ದಾವೂದ್ ಇಬ್ರಾಹಿಂ ಯಾವ ದೇಶದಲ್ಲಿದ್ದಾನೆ ಮಾತ್ರವಲ್ಲ, ಅವನ ಮನೆ ನಂಬರ್ ಸಹಿತ ಜಗತ್ತಿಗೆ ಅನಾವರಣ ಮಾಡಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶವೊಂದರಲ್ಲಿ ಮಾತನಾಡಿರುವ ಕಮ್ರಾನ್ ಫರೀದಿ ಎಂಬ ಅಮೆರಿಕದ ಮಾಜಿ ಗೂಢಚರ, ಭೂಗತಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ. ಅಲ್ಲಿ ಅವನಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಐಎಸ್ಐ ಜತೆಗೆ ಅಲ್-ಖೈದಾ ಸಂಘಟನೆ ಅವರು ಭದ್ರತೆ ನೀಡುತ್ತಿದ್ದಾರೆ. ಅವನು ವಾಸಿಸುತ್ತಿರುವ ಪ್ರದೇಶವನ್ನು '22 ಜಮ್‌ಜಮಾ' ಎಂದು ಕರೆಯುತ್ತಾರೆಂದು ಫರೀದಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಕರಾಚಿಯಲ್ಲಿ ದಾವೂದ್ ವಾಸಿಸುವ ಸ್ಥಳ ಹೊರಗಿನಿಂದ ನೋಡಲು ಸಾಮಾನ್ಯವಾಗಿಯೇ ಕಾಣಿಸುತ್ತದೆ. ಆದರೆ, ಅದರೊಳಗೆ ಎಲ್ಲಾ ಐಷಾರಾಮಿ ವ್ಯವಸ್ಥೆಯಿದೆ ಎಂದು ತಿಳಿಸಿದ್ದಾರೆ. ದಾವೂದ್ ಇಬ್ರಾಹಿಂ ನೀವು ತಿಳಿದಿರುವಂತೆ ಅವನೇನು ಧಾರ್ಮಿಕ ವ್ಯಕ್ತಿಯಲ್ಲ, ಅವನು ದಿನಕ್ಕೆ ಐದು ಬಾರಿ ನಮಾಜ್ಅನ್ನು ಮಾಡುವುದಿಲ್ಲ, ಅವನು ಕೊಕೇನ್ ಮತ್ತು ಮದ್ಯಕ್ಕೆ ದಾಸನಾಗಿದ್ದಾನೆ. ದಿನಾಲೂ ಮದ್ಯ ಕುಡಿಯುತ್ತಾ, ಪಾಕ್ನ ಸೇನಾಧಿಕಾರಿಗಳ ಜತೆಗೆ ಹೆಣ್ಣು ಮಕ್ಕಳ ಡಾನ್ಸ್ ನೋಡುತ್ತಾ ಇರುತ್ತಾನೆಂದು ಅವರು ಹೇಳಿದ್ದಾರೆ.
ನನ್ನ ಪಾಕಿಸ್ತಾನದಲ್ಲಿರುವ ಮಾಹಿತಿದಾರರ ಪ್ರಕಾರ, ಅವನು ಸುಮಾರು 1-2 ಲಕ್ಷ ಮೌಲ್ಯದ ಮದ್ಯದ ಬಾಟಲ್ಗಳನ್ನು ಥೈಲ್ಯಾಂಡ್ ಮಾರ್ಗವಾಗಿ ಪಾಕಿಸ್ತಾನಕ್ಕೆ ತಂದುಕೊಳ್ಳುತ್ತಾನೆಂದು ಫರೀದಿ ತಿಳಿಸಿದ್ದಾರೆ. ಆದರೆ, ಅವನ ಆರೋಗ್ಯ ಅಷ್ಟೇನು ಸರಿಯಿಲ್ಲ ಎಂದು ನಾನು ಕೇಳಿ ಪಟ್ಟಿದ್ದೇನೆಂದು ಅವರು ಹೇಳಿದ್ದಾರೆ.
ಇನ್ನೂ ಭಾರತದೊಂದಿಗೆ ಪಾಕಿಸ್ತಾದ ಘರ್ಷಣೆ ಆರಂಭವಾದಾಗ ದಾವೂದ್ ತನ್ನ ಮನೆಯಲ್ಲಿರುವ ನೆಲ ಮಾಳಿಗೆ ಮೂಲಕ ಬೇರೊಂದು ಸುರಕ್ಷಿತ ಸ್ಥಳಕ್ಕೆ ಹೋಗಿ ಅಡಗಿ ಕುಳಿತುಕೊಳ್ಳುತ್ತಾನೆ. ಈ ಆಪರೇಷನ್ ಸಿಂಧೂರ್ ಸಮಯದಲ್ಲೂ ಅವನು ತನ್ನ ನೆಲ ಮಾಳಿಗೆ ಮೂಲಕವೇ ಬೇರೊಂದು ಸ್ಥಳಕ್ಕೆ ತಲೆ ಮರಿಸಿಕೊಂಡಿದ್ದ, ಆಮೇಲೆ ಪರಿಸ್ಥಿತಿ ತಿಳಿಯಾದ ಮೇಲೆ ಮತ್ತೆ ತನ್ನ ನಿವಾಸಕ್ಕೆ ಮರಳಿದ್ದಾನೆಂದು ಹೇಳಿದ್ದಾರೆ.
ಯಾವ ವರ್ಷವೆಂದು ಹೇಳಲು ಇಷ್ಟಪಡದ ಫರೀದಿ, ನಾನು ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅನೇಕ ಬಾರಿ ದಾವೂದ್ ಇಬ್ರಾಹಿಂ ನನ್ನು ಬೇಟಿ ಮಾಡಿದ್ದೇನೆ. ಅವನು ಒಂದರ್ಥದಲ್ಲಿ ಅಲ್ಲಿ ಆರಾಮದಾಯಕ ಜೀವನ ನಡೆಸುತ್ತಿದ್ದಾನೆ. ಅವನು ಆತನ ಆಪ್ತರ ಜತೆಗೆ ಪಾರ್ಟಿ ಮಾಡುತ್ತಾ, ತನ್ನ ವೆಪನ್ ಮತ್ತು ಡ್ರಗ್ಸ್ ದಂಧೆ ನಡೆಸುತ್ತಾ ಬದುಕುತ್ತಿದ್ದಾನೆಂದು ಕಮ್ರಾನ್ ಫರೀದಿ ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).