ಕಲ್ಲಿದ್ದಿಲು ಹಗರಣ ಆರೋಪ: ನೋಟಿಸ್​ಗೆ ಉತ್ತರ ನೀಡದ ಮಮತಾ ಬ್ಯಾನರ್ಜಿ: ಕೋರ್ಟ್​ನಲ್ಲಿ ಭೇಟಿಯಾಗುತ್ತೇನೆಂದ ಸುವೇಂದು ಅಧಿಕಾರಿ | Suvendu Adhikari

ಸಿಎಂ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ
ಸಿಎಂ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ
Published on
ಕೋಲ್ಕತ್ತಾ: ಮಾನನಷ್ಟ ಮೊಕದ್ದಮೆ ಲೀಗಲ್​ ನೋಟಿಸ್​ಗೆ ಉತ್ತರಿಸದ ಹಿನ್ನೆಲೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಬುಧವಾರ(ಜ. 14) ಬಿಜೆಪಿ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ(Suvendu Adhikari) ಹೇಳಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅಧಿಕಾರಿ, ಮಮತಾ ಬ್ಯಾನರ್ಜಿ ಅವರು ಬುದ್ಧಿಮಾಂದ್ಯರಂತೆ ಕಾಣುತ್ತಿದ್ದಾರೆ. ನನ್ನ ಮಾನನಷ್ಟ ಮೊಕದ್ದಮೆ ನೋಟಿಸ್​ಗೆ ಉತ್ತರಿಸಲು, ಪುರಾವೆ ಒದಗಿಸಲು ಅವರಿಗೆ ನೀಡಿದ್ದ ಸಮಯ ಈಗ ಮುಗಿದಿದೆ. ಈಗ ಅವರು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವುದರಿಂದ ಉತ್ತರಿಸಲು ಸಾಧ್ಯವಾಗುತ್ತಿಲ್ಲ. 
ಕಲ್ಲಿದ್ದಲು ಹಗರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬ ಅವರ ಕಾಲ್ಪನಿಕ ಆರೋಪಗಳು ಅವರ ಮನಸ್ಥಿತಿಯನ್ನು ಬಹಿರಂಗಪಡಿಸಿವೆ. ಮಮತಾ ಬ್ಯಾನರ್ಜಿಯವರೇ ಕಾನೂನು ಪರಿಣಾಮಗಳನ್ನು ಎದುರಿಸಲು ಸಿದ್ದರಾಗಿ ನಾನು ನಿಮ್ಮನ್ನು ಕೋರ್ಟ್​​ನಲ್ಲಿ ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಐ-ಪ್ಯಾಕ್​ ಕಚೇರಿ ಮೇಲಿನ ಇಡಿ ದಾಳಿ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ, ಕಲ್ಲಿದ್ದಿಲು ಕಳ್ಳಸಾಗಾಣೆ ಆರೋಪ ಪ್ರಕರಣದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಹಣ ಹೋಗಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಭಾಗಿಯಾಗಿದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. 
ಸಿಎಂ ಬ್ಯಾನರ್ಜಿ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ(ಜ. 09) ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಲೀಗಲ್ ನೋಟಿಸ್ ಕಳುಹಿಸಿದ್ದರು. ನೋಟಿಸ್ ತಲುಪಿದ 72 ಗಂಟೆಯಲ್ಲಿ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಪುರಾವೆ ಒದಗಿಸಬೇಕು, ಇಲ್ಲದಿದ್ರೆ ಮಾನನಷ್ಟ ಮೊಕದ್ದೆಮ ಹೂಡುವುದಾಗಿ ಹೇಳಿದ್ದರು (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net