ಇಂಧನ ಬಿಕ್ಕಟ್ಟು ಹಿನ್ನೆಲೆ ಸಿಎನ್ಜಿ ಬೆಲೆ ಮತ್ತೆ ಏರಿಕೆ: ಪ್ರತಿ ಕೆಜಿಗೆ 3.89 ರೂ. ಹೆಚ್ಚಳ | CNG prices
ಸಾಂದರ್ಭಿಕ ಚಿತ್ರ
Published on:
Copied
Follow Us
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್ಜಿ ಬೆಲೆ(CNG prices) ಏರಿಕೆಯಾಗಿದ್ದು, ನಗರ ಅನಿಲ ವಿತರಣಾ ಕಂಪನಿ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಇಂದು(ಆ. 29) ಬೆಳಿಗ್ಗೆ 6 ಗಂಟೆಯಿಂದ ಪ್ರತಿ ಕೆಜಿಗೆ ಸಿಎನ್ಜಿ ಬೆಲೆಯನ್ನು 3.89 ರೂ. ಹೆಚ್ಚಿಸುವುದಾಗಿ ಘೋಷಿಸಿದೆ.
ದೆಹಲಿಯಲ್ಲಿ ಪ್ರಸ್ತುತ ಪ್ರತಿ ಕೆಜಿಗೆ ಸಿಎನ್ಜಿ ಬೆಲೆ 86.98 ರೂ. ತಲುಪಿದೆ. ಅದೇ ರೀತಿ ನೋಯ್ಡಾದಲ್ಲಿ 95.59, ಗಾಜಿಯಾಬಾದ್ನಲ್ಲಿ 95.59, ಗುರುಗ್ರಾಮ್ನಲ್ಲಿ 92.01, ಮೀರತ್ನಲ್ಲಿ 95.47, ಮುಜಫರ್ನಗರದಲ್ಲಿ 95.47, ಹಾಗೂ ಶಾಮ್ಲಿಯಲ್ಲಿ 95.47 ರೂಪಾಯಿವರೆಗೂ ತಲುಪಿದೆ.
ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿರುವುದು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಎನ್ಜಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿರುವುದು ಇತ್ತೀಚಿನ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಐಜಿಎಲ್ ಹೇಳಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಆರಂಭವಾದಾಗಿನಿಂದ ಸಿಎನ್ಜಿ ಬೆಲೆ ಏರಿಕೆಯಾಗುತ್ತಿರುವುದು ಇದು ಐದನೇ ಬಾರಿಯಾಗಿದೆ.
ಮೇ 15ರಿಂದ ಒಟ್ಟು ನಾಲ್ಕು ಹಂತಗಳಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿದೆ. ಇತ್ತೀಚಿನ ಬೆಲೆ ಏರಿಕೆಯು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾವಿರಾರು ಸಿಎನ್ಜಿ ವಾಹನ ಮಾಲೀಕರ ಮೇಲೆ ಹೆಚ್ಚುವರಿ ಹೊರೆಯನ್ನು ಹೇರಲಿದೆ (ಏಜೆನ್ಸೀಸ್).