ಬಿಳಿ ಅಂಗಿ, ಪಂಚೆ ಬಿಟ್ಟು ಕಪ್ಪು ಸೂಟ್ ಧರಿಸಿದ್ದೇಕೆ ದಳಪತಿ?.. ಇಲ್ಲಿದೆ ಅಸಲಿ ಕಾರಣ..Vijay TVK

 Vijay TVK
Vijay TVK
Published on

ಪ್ರಮುಖ ಮುಖ್ಯಾಂಶಗಳು

  • ಅವಂತ್-ಗಾರ್ಡ್' ಶೈಲಿಯ ಕಪ್ಪು ಸೂಟ್‌ನಲ್ಲಿ ಮಿಂಚಿದ ತಮಿಳುನಾಡಿನ ಸಿಎಂ ವಿಜಯ್
  • ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ಮತ್ತು ಇ.ವಿ. ರಾಮಸ್ವಾಮಿ ಅವರ ವಿಚಾರಧಾರೆ ಸಂಕೇತ
  • ನನ್ನನ್ನು ಹೊರತುಪಡಿಸಿ ಯಾರ ಅಧಿಕಾರ ಕೇಂದ್ರ ಇರುವುದಿಲ್ಲ ಎಂದು ಹೇಳಿದ ಸಿಎಂ ವಿಜಯ್
ಚೆನ್ನೈ: ಮೇ.10ರಂದು ತಮಿಳುನಾಡಿನ ಚೆನ್ನೈ ಸೇರಿದಂತೆ ಭಾರತದ ಇಡೀ ರಾಜ್ಯ ನಟ ವಿಜಯ್​ನ ಪ್ರಮಾಣ ವಚನ ಸ್ವೀಕಾರ ನೋಡುವಲ್ಲಿ ತಲ್ಲೀನರಾಗಿದ್ದರು. ಆತನ ಹಾವ-ಭಾವಕ್ಕೆ ಎಲ್ಲ ಫಿದಾ ಆಗಿದ್ದರು. ಅದರಲ್ಲೂ ತ್ರಿಶಾ ಆಗಮನ ಸೆಂಟರ್​ ಆಫ್​ ಅಟ್ರ್ಯಾಕ್ಷನ್​ ಆಗಿ ಬದಲಾಯ್ತು. ಇನ್ನು ವಿಜಯ್​​ ವೇದಿಕೆಗೆ ಕಾಲಿಡುತ್ತಲೇ ಗಮನ ಸೆಳೆದಿದ್ದು, ಎಲ್ಲರಿಗೂ ಅಚ್ಚರಿ ಎನಿಸಿದ್ದು ಅವರು ತೊಟ್ಟಿದ್ದ ಬ್ಲ್ಯಾಕ್​ ಸ್ಯೂಟ್​​.
ಹೌದು, ಟಿವಿಕೆ ಸಂಸ್ಥಾಪಕ ವಿಜಯ್​ ಅವರು ನಿನ್ನೆ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ವಿಜಯ್​ ಪದಗ್ರಹಣ ನಡೆದಿತ್ತು. ವಿಜಯ್​ ಅವರು ದಶಕಕ್ಕೂ ಹೆಚ್ಚು ಕಾಲದಿಂದ ಇರುವ ದಕ್ಷಿಣ ಭಾರತದ ರಾಜಕೀಯ ನಾಯಕರ ಅಥವಾ ಸಿಎಂ ಆಗುವಾಗ ಸಾಮಾನ್ಯವಾಗಿ ನಾಯಕರು ಧರಿಸುವ ಡ್ರೆಸ್​ ಕೋಡ್​ ಆದ ಬಿಳಿ ಪಂಚೆ ಮತ್ತು ಶರ್ಟ್​ ಧರಿಸದೆ,  ಚೆನ್ನಾಗಿ ವಿನ್ಯಾಸಗೊಳಿಸಲಾದ ಕಪ್ಪು ಸೂಟ್ ಅದಕ್ಕೆ ಬಿಳಿ ಶರ್ಟ್  ಧರಿಸಿ, ರಾಜಕೀಯ ಹೀರೋನಂತೆ ಕಂಡರು ಅಷ್ಟೇ ಅಲ್ಲದೆ ಬಿಳಿ ಶರ್ಟ್-ಮತ್ತು-ಧೋತಿ ಉಡುಪುಗಳಿಗೆ ಆದ್ಯತೆ ನೀಡುವ ದಶಕಗಳ ತಮಿಳುನಾಡು ರಾಜಕೀಯ ಸಂಪ್ರದಾಯಗಳನ್ನು ಮುರಿದಿದ್ದಾರೆ. 

ಕಪ್ಪು ಸೂಟ್ ಧರಿಸಿದ್ಯಾಕೆ? 

ನಟ ವಿಜಯ್, ತಮ್ಮ 'ತಮಿಳಗ ವೆಟ್ರಿ ಕಳಗಂ'  ಪಕ್ಷದ ಪ್ರಮಾಣ ವಚನ ಸಮಾರಂಭದಲ್ಲಿ ಕಪ್ಪು ಉಡುಗೆ ತೊಟ್ಟಿದ್ದು ಕೇವಲ ಫ್ಯಾಷನ್​ಗಾಗಿ ಅಲ್ಲ ಬದಲಿಗೆ ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ವಿಚಾರಧಾರೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಹೇಳಲಾಗುತ್ತಿದೆ.
ಪೆರಿಯಾರ್‌ವಾದಿಗಳು ಸಾಂಪ್ರದಾಯಿಕ ಅಧಿಕಾರವನ್ನು ಪ್ರಶ್ನಿಸಲು ಕಪ್ಪು ಶರ್ಟ್ ಮತ್ತು ಕಪ್ಪು ಧ್ವಜಗಳನ್ನು ಬಳಸುತ್ತಾರೆ. ವಿಜಯ್ ಅವರ ಕಪ್ಪು ಸೂಟ್ ಆಯ್ಕೆಯು ದ್ರಾವಿಡ ಚಳವಳಿಯ ಈ ಸಿದ್ಧಾಂತದೊಂದಿಗೆ ಬೆರೆತ ಆಧುನಿಕ 'ಪವರ್ ಡ್ರೆಸ್ಸಿಂಗ್' ಆಗಿ ವಿಶ್ಲೇಷಿಸಲಾಗುತ್ತಿದೆ.
ಆಡಳಿತದ ಬಗ್ಗೆ ಕಟ್ಟುನಿಟ್ಟಾದ ಸಂದೇಶ ನೀಡಿದ ವಿಜಯ್, ನನ್ನನ್ನು ಹೊರತುಪಡಿಸಿ ಬೇರೆ ಯಾವುದೇ ಅಧಿಕಾರ ಕೇಂದ್ರ ಇರುವುದಿಲ್ಲ. ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ನಿಯಂತ್ರಣ ನನ್ನದೇ ಆಗಿರುತ್ತದೆ ಎಂದು ಘೋಷಿಸಿದರು. ಇದು ಯಾವುದೇ ಮೈತ್ರಿ ಪಕ್ಷಗಳ ಒತ್ತಡಕ್ಕೆ ತಮ್ಮ ಸರ್ಕಾರ ಮಣಿಯುವುದಿಲ್ಲ ಎಂಬ ಭರವಸೆಯನ್ನು ಜನತೆಗೆ ನೀಡಿದೆ.
ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವವರಿಗೆ ನೇರ ಎಚ್ಚರಿಕೆ ನೀಡಿದರು. ನಾನು ತಪ್ಪು ಮಾಡುವುದಿಲ್ಲ, ನನ್ನ ಜೊತೆ ಇರುವವರಿಗೂ ತಪ್ಪು ಮಾಡಲು ಬಿಡುವುದಿಲ್ಲ. ಯಾರಾದರೂ ತಪ್ಪು ಆಲೋಚನೆಗಳನ್ನು ಹೊಂದಿದ್ದರೆ, ಅದನ್ನು ಕೂಡಲೇ ಡಿಲೀಟ್ ಮಾಡಿ,ಎಂದು ಗುಡುಗಿದರು.
ಸರ್ಕಾರ ರಚನೆಗೆ ಅಗತ್ಯವಾದ 118ರ ಮ್ಯಾಜಿಕ್ ಸಂಖ್ಯೆ ತಲುಪಲು ಬೆಂಬಲಿಸಿದ ಮಿತ್ರಪಕ್ಷಗಳಿಗೆ ವಿಜಯ್ ಧನ್ಯವಾದ ಅರ್ಪಿಸಿದರು. ವಿಶೇಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು "ನನ್ನ ಸಹೋದರ" ಎಂದು ಕರೆದರು .

ಹೀಗಿದೆ ವಿಜಯ್​ ಅವರ ಸಂಪುಟ

ವಿಜಯ್ ಅವರೊಂದಿಗೆ ಟಿವಿಕೆ ಪಕ್ಷದ ಒಂಬತ್ತು ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬೆಂಬಲ ನೀಡಿರುವ ಕಾಂಗ್ರೆಸ್, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ ನಾಯಕರು ಖಾತೆ ಹಂಚಿಕೆಯ ಚರ್ಚೆಗಳ ನಂತರ ಮುಂದಿನ ಹಂತದಲ್ಲಿ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net