ಕಳೆದ ಹಲವು ವರ್ಷಗಳಿಂದ ಕೇಂದ್ರ ಗೃಹ ಸಚಿವಾಲಯ ಹಾಗೂ ಖುದ್ದಾಗಿ ಅಮಿತ್ ಷಾ ಅವರು ವಿನಂತಿಸಿದರೂ, ಹಿಂದಿನ ಮಮತಾ ಬ್ಯಾನರ್ಜಿ ಸರ್ಕಾರವು ಕೇವಲ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಿಎಸ್ಎಫ್‌ಗೆ ಭೂಮಿ ನೀಡದೆ ತಡೆ ಹಿಡಿದಿತ್ತು. ಗಡಿಗಳು ತೆರೆದುಕೊಂಡಿದ್ದರಿಂದಲೇ ರಾಜ್ಯದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಬಲವಂತದ ಮತಾಂತರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದವು. ಈಗ ಆ ದಿನಗಳು ಮುಗಿದಿವೆ. ಮುಂದಿನ 600 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಭೂಮಿಯ ಅಗತ್ಯವಿದೆಯೋ, ಅದನ್ನು ತಕ್ಷಣವೇ ಸ್ವಾಧೀನಪಡಿಸಿಕೊಂಡು ಬಿಎಸ್ಎಫ್‌ಗೆ ನೀಡಲಾಗುವುದು ಎಂದು ಸಿಎಂ ಸಾರಿದ್ದಾರೆ.