Traffic Challan : ಯಾವುದೇ ವಾಹನ ಸವಾರರು ಅಥವಾ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ, ಟ್ರಾಫಿಕ್ ಪೊಲೀಸರು ದಂಡದ ಚಲನ್‌ಗಳನ್ನು ನೀಡುತ್ತಾರೆ. ಅದನ್ನು ತಕ್ಷಣವೇ ಪಾವತಿಸಬೇಕು ಅಂತೇನಿಲ್ಲ. ಬೇಕು ಅನಿಸಿದಾಗ ದಂಡವನ್ನು ಕಟ್ಟಬಹುದು. ಆದರೆ, ಒಂದು ವಾಹನಕ್ಕೆ ಅತಿಯಾದ ಚಲನ್‌ಗಳು ಬಂದಾಗ ಆ ವಾಹನವನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಾರೆ. ಇದಿಷ್ಟು ಈಗ ನಡೆಯುತ್ತಿರುವ ಪ್ರಕ್ರಿಯೆ. ಆದರೆ, ವಾಹನ ಸವಾರರ ಎದೆ ಝಲ್ ಎನ್ನುವಂತಹ ವ್ಯವಸ್ಥೆಯೊದು ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ. ಸದ್ಯ ಇಂಥದ್ದೊಂದು ವ್ಯವಸ್ಥೆ ತೆಲಂಗಾಣದಲ್ಲಿ ಬರಲಿದೆ ಎನ್ನುವ ವರದಿ ಇದೆ. ಅದೇ ರೀತಿ ಕರ್ನಾಟಕದಲ್ಲೂ ಮುಂದೊಂದು ದಿನ ಬಂದರೆ ಅಚ್ಚರಿಪಡಬೇಕಿಲ್ಲ.