ಇಂದಿರಾ ಗಾಂಧಿ ಜನ್ಮದಿನ ಅಂಗವಾಗಿ ಮಹಿಳೆಯರಿಗೆ ಒಂದು ಕೋಟಿ ಇಂದಿರಾ ಸೀರೆ ಹಂಚಿಕೆಗೆ ಸಿಎಂ ರೇವಂತ್ ರೆಡ್ಡಿ ಚಾಲನೆ | CM Revanth Reddy

ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿಯಿಂದ ಸೀರೆ ಹಂಚಿಕೆಗೆ ಚಾಲನೆ
ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿಯಿಂದ ಸೀರೆ ಹಂಚಿಕೆಗೆ ಚಾಲನೆ
Published on
ಹೈದರಾಬಾದ್: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಅಂಗವಾಗಿ ಇಂದು(ನ. 19) ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿ(CM Revanth Reddy) ಒಂದು ಕೋಟಿ ಮಹಿಳೆಯರಿಗೆ, ಇಂದಿರಮ್ಮ ಸೀರೆ ಹಂಚಿಕೆಗೆ ಚಾಲನೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವತಿಯಿಂದ ರಾಜ್ಯದ ಒಂದು ಕೋಟಿ ಮಹಿಳೆಯರಿಗೆ ಒಂದು ಕೋಟಿ ಸೀರೆ ನೀಡಲು ರಾಜ್ಯ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ದೇಶದಲ್ಲಿ ರಾಜಕೀಯ ನಿರ್ವಾತ ಇದ್ದ ಸಮಯದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣ, ಕೃಷಿ ಭೂಮಿ ಮಿತಿ ಕಾಯ್ದೆ ತಂದು ಬಡವರಿಗೆ ಭೂಮಿಯನ್ನು ಹಂಚಿದರು. ಬಡವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟರು ಇದೆಲ್ಲವನ್ನೂ ಮಾಡಲು ಇಂದಿರಮ್ಮನಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ ದೃಢವಾಗಿ ನಿಂತ ಧೈರ್ಯಶಾಲಿ ಮಹಿಳೆ ಇಂದಿರಮ್ಮ ಎಂದು ಅವರು ಹೊಗಳಿ ಅವರು, ದೇಶಕ್ಕೆ ಬಲವಾದ ನಾಯಕತ್ವವನ್ನು ನೀಡಿದರು. ಇಂದಿರಾ ಗಾಂಧಿಯವರ ಸ್ಫೂರ್ತಿಯೊಂದಿಗೆ ನಮ್ಮ ಸರ್ಕಾರ ಮುಂದುವರಿಯುತ್ತದೆ. ಪೆಟ್ರೋಲ್ ಪಂಪ್‌ಗಳನ್ನು ಒದಗಿಸುವ ಮೂಲಕ ಅವರು ಮಹಿಳೆಯರನ್ನು ಪ್ರೋತ್ಸಾಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರದಲ್ಲಿ ಮಹಿಳೆಯರ ಕಲ್ಯಾಣ ಹಾಗೂ ಆರ್ಥಿಕ ಉನ್ನತಿಗಾಗಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಹೆಣ್ಣು ಮಕ್ಕಳಿಗೆ ಇಂದಿರಮ್ಮ ಹೆಸರಿನಲ್ಲಿ ಮನೆಗಳನ್ನು ಮಂಜೂರು ಮಾಡುತ್ತಿದ್ದೇವೆ. ರಾಜಕೀಯದಲ್ಲೂ ಮಹಿಳೆಯರಿಗೆ ನಾವು ಸೂಕ್ತ ಪ್ರಾಮುಖ್ಯತೆ ನೀಡಿದ್ದೇವೆ. ಒಂದು ಕೋಟಿ ಹೆಣ್ಣು ಮಕ್ಕಳನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಸರ್ಕಾರವು ತೆಲಂಗಾಣ ಹೆಣ್ಣು ಮಕ್ಕಳಿಗೆ ಸೀರೆ ನೀಡುವ ಮೂಲಕ ಅವರನ್ನು ಗೌರವಿಸಬೇಕು ಎಂದು ನಾವು ಭಾವಿಸಿದ್ದೇವೆ. ಅದಕ್ಕಾಗಿಯೇ ಒಂದು ಕೋಟಿ ಹೆಣ್ಣು ಮಕ್ಕಳಿಗೆ ಒಂದು ಕೋಟಿ ಸೀರೆಗಳನ್ನು ವಿತರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಇಂದು ಇಂದಿರಮ್ಮ ಜಯಂತಿಯಂದು ಪ್ರಾರಂಭಿಸಲಾದ ಈ ಕಾರ್ಯಕ್ರಮವನ್ನು ಡಿಸೆಂಬರ್ 9ರವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸೀರೆಗಳನ್ನು ವಿತರಿಸಲಾಗುವುದು. ಅದೇ ರೀತಿ, ಮಾರ್ಚ್ 1ರಿಂದ 8ರ ಮಹಿಳಾ ದಿನದವರೆಗೆ ನಗರ ಪ್ರದೇಶಗಳಲ್ಲಿ ವಿತರಿಸಲಾಗುವುದು. ನಾವು ಪ್ರತಿ ಹೆಣ್ಣು ಮಗುವಿಗೆ ಒಂದು ಸೀರೆಯನ್ನು ನೀಡುತ್ತೇವೆ. ಮೊದಲ ಹಂತದಲ್ಲಿ 65 ಲಕ್ಷ ಸೀರೆಗಳನ್ನು ವಿತರಿಸುತ್ತೇವೆ. ಸೀರೆಗಳನ್ನು ಉತ್ಪಾದಿಸಲು ತೆಗೆದುಕೊಳ್ಳುವ ಸಮಯವನ್ನು ಗಮನದಲ್ಲಿಟ್ಟುಕೊಂಡು ಎರಡು ಹಂತಗಳಲ್ಲಿ ಸೀರೆಗಳನ್ನು ವಿತರಿಸುತ್ತಿದ್ದೇವೆ ಸಿಎಂ ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net