ಮನೆಯಿಂದ ಕಾಲ್ನಡಿಗೆಯಲ್ಲೇ ತೆರಳಿ ಭವಾನಿಪುರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಸಿಎಂ ಮಮತಾ ಬ್ಯಾನರ್ಜಿ: ಭಾರೀ ಜನಸ್ತೋಮ | CM Mamata Banerjee

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ(CM Mamata Banerjee) ಬುಧವಾರ(ಏ. 08) ತಮ್ಮ ಕಾಲಿಘಾಟ್ ನಿವಾಸದಿಂದ ಹೊರಬಂದು ಕಾಲ್ನಡಿಗೆಯಲ್ಲಿಯೇ ತೆರಳಿ ಭಬಾನಿಪುರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಅವರನ್ನು ಬೆಂಬಲಿಸಲು ಭಾರಿ ಜನಸ್ತೋಮವೇ ಸೇರಿದೆ.
ಚುನಾವಣಾ ಕಚೇರಿಗೆ ನಾಮಪತ್ರ ಸಲ್ಲಿಸಲು ತಮ್ಮದೇ ಸರಳ ಉಡುಪನ್ನು ಧರಿಸಿ ಕೈಮುಗಿಯುತ್ತ ಸುಮಾರು 800 ಮೀಟರ್ ರಸ್ತೆಯಲ್ಲಿ ನಡೆದು ಹೋಗುವಾಗ ರಸ್ತೆ ಎರಡು ಬದಿಯಲ್ಲಿ ಪಕ್ಷ ಕಾರ್ಯಕರ್ತರು ಸೇರಿ ಭಾರಿ ಜನಸಂಖ್ಯೆ ಅವರನ್ನು ಸ್ವಾಗತಿಸಿದೆ.
ಮೆರವಣಿಗೆಯ ಉದ್ದಕ್ಕೂ ಟಿಎಂಸಿ ಬೆಂಬಲಿಗರು ಮಮತಾ ಬ್ಯಾನರ್ಜಿ ಜಿಂದಾಬಾದ್ ಮತ್ತು ಟಿಎಂಸಿ ಜಿಂದಾಬಾದ್ ಮುಂತಾದ ಘೋಷಣೆಗಳನ್ನು ಕೂಗಿದ್ದಾರೆ. ನಾಮಿನೇಷನ್ ಮೆರವಣಿಗೆಯನ್ನು ಟಿಎಂಸಿ ಕಾರ್ಯಕರ್ತರು ತಮ್ಮ ನಾಯಕಿಯ ರಾಜಕೀಯ ಶಕ್ತಿಯ ಪ್ರದರ್ಶನವನ್ನಾಗಿ ತೋರಿಸಿದ್ದಾರೆ.
ಭವಾನಿಪುರದಿಂದ ಮೂರು ಬಾರಿ ಶಾಸಕರಾಗಿರುವ ಮಮತಾ ಬ್ಯಾನರ್ಜಿ ನಾಲ್ಕನೇ ಬಾರಿ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸ್ಪರ್ಧಿಸಿದ್ದು, ಕ್ಷೇತ್ರ ದೇಶಾದ್ಯಂತ ಎಲ್ಲರತ್ತ ಗಮನ ಸೆಳೆಯುವಂತೆ ಮಾಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net