ಪ್ರಸ್ತಾವನೆಯನ್ನು ಮಂಡಿಸಿ ಮಾತನಾಡಿರುವ ಸಿಎಂ ಮಾನ್, ಪಕ್ಷದಲ್ಲಿ ಆಂತರಿಕ ಬಿರುಕುಗಳಿವೆ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ್ದು, ಅವು ದಾರಿತಪ್ಪಿಸುವಂತಿವೆ. ಮತ್ತು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ. ಪಂಜಾಬ್, ದೆಹಲಿ, ಗುಜರಾತ್, ಗೋವಾ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಪಕ್ಷ ಬೆಳೆಯುತ್ತಿದೆ. ಇದಲ್ಲದೆ, ವಿವಿಧ ಸ್ಥಳಗಳಲ್ಲಿ ಮೇಯರ್‌ಗಳು, ಕೌನ್ಸಿಲರ್‌ಗಳು, ಸರಪಂಚರಿದ್ದಾರೆ. ಜೊತೆಗೆ ಪಕ್ಷವು ರಾಷ್ಟ್ರೀಯ ಅಸ್ತಿತ್ವವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.