ಲಗೇಜು ಹಿಡಿದು ಲಿಫ್ಟ್​ ಒಳಗೆ ಬಂದ ಯುವತಿ... ಹಿಂದೆಯೇ ಬಲೂನ್​ ಹಿಡಿದು ಬಂದ ಯುವಕ: ಬಳಿಕ ನಡೆದಿದ್ದು ಭಯಾನಕ! Mumbai Lift

ಮುಂಬೈನಲ್ಲಿರುವ ಕಟ್ಟಡವೊಂದರ ಲಿಫ್ಟ್​ನಲ್ಲಿ ( Mumbai Lift  ) ಅನಿರೀಕ್ಷಿತ ಘಟನೆ
ಮುಂಬೈನಲ್ಲಿರುವ ಕಟ್ಟಡವೊಂದರ ಲಿಫ್ಟ್​ನಲ್ಲಿ ( Mumbai Lift ) ಅನಿರೀಕ್ಷಿತ ಘಟನೆ
Published on

ಪ್ರಮುಖ ಮುಖ್ಯಾಂಶಗಳು

  • ನಗರಿ ಮುಂಬೈನಲ್ಲಿರುವ ಕಟ್ಟಡವೊಂದರ ಲಿಫ್ಟ್​ನಲ್ಲಿ ಯಾರೂ ನಿರೀಕ್ಷಿಸದ ಘಟನೆ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಲಿಫ್ಟ್​ ವಿಡಿಯೋ
  • ಬಲೂನ್​ ಹಿಡಿದು ಬಂದ ವ್ಯಕ್ತಿ ಲಿಫ್ಟ್​ ಒಳಗೆ ಎಂಟ್ರಿ ಆಗುತ್ತಿದ್ದಂತೆ ಸ್ಫೋಟ
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿರುವ ಕಟ್ಟಡವೊಂದರ ಲಿಫ್ಟ್​ನಲ್ಲಿ ( Mumbai Lift ) ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ಅಷ್ಟಕ್ಕೂ ನಡೆದಿದ್ದೇನೆಂದರೆ, ಬಿಳಿ ಬಣ್ಣದ ಶರ್ಟ್​ ಧರಿಸಿರುವ ಯುವತಿಯೊಬ್ಬಳು ತನ್ನ ಸಣ್ಣ ಟ್ರಾಲಿ ಲಗೇಜ್​ ಅನ್ನು ಎಳೆದುಕೊಂಡು ಲಿಫ್ಟ್​ ಒಳಗೆ ಪ್ರವೇಶ ಮಾಡುತ್ತಾಳೆ. ಬಳಿಕ ತಾನು ಹೋಗಲು ಬಯಸಿರುವ ಮಹಡಿಗಾಗಿ ಬಟನ್​ ಪ್ರೆಸ್​ ಮಾಡುತ್ತಾಳೆ. ಇದೇ ಸಮಯದಲ್ಲಿ ಓರ್ವ ವ್ಯಕ್ತಿ ಡಜನ್​ಗಟ್ಟಲೆ ಬಲೂನ್​ಗಳು ತುಂಬಿರುವ ದೊಡ್ಡ ಪಾಲಿಥೇನ್ ಚೀಲದೊಂದಿಗೆ ಲಿಫ್ಟ್​ ಒಳಗೆ ಬರಲು ಕಷ್ಟಪಡುತ್ತಾನೆ.
ಬಲೂನ್​ ತರುವ ವ್ಯಕ್ತಿಯನ್ನು ನೋಡಿದ ಮಹಿಳೆ, ಆತನಿಗಾಗಿ ಜಾಗ ಮಾಡಿಕೊಡುತ್ತಾಳೆ. ಬಳಿಕ ಆತ ಒಂದು ಮೂಲೆಯಲ್ಲಿ ನಿಲ್ಲುತ್ತಾನೆ. ಇದೇ ಸಮಯದಲ್ಲಿ ಕಪ್ಪು ಬಣ್ಣದ ಶರ್ಟ್​ ಧರಿಸಿದ ವ್ಯಕ್ತಿ ಇನ್ನೇನು ಲಿಫ್ಟ್​ ಒಳಗೆ ಎಂಟ್ರಿಯಾಗ ಬೇಕು ಅಷ್ಟರಲ್ಲಿ, ಲಿಫ್ಟ್​ ಒಳಗಡೆ ಇದ್ದ ಬಲೂನ್​ಗಳು ಸ್ಫೋಟಗೊಂಡ ಬೆಂಕಿಯ ಉಂಡೆಯನ್ನು ಉಗುಳುತ್ತವೆ.
ಬಲೂನ್​ ಸ್ಫೋಟದ ಬೆಂಕಿಯ ಜ್ವಾಲೆಗಳು, ಸ್ವಲ್ಪ ಸಮಯದವರೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಆವರಿಸಿಬಿಡುತ್ತದೆ. ಇದರಿಂದ ಲಿಫ್ಟ್​ ಒಳಗೆ ಏನಾಗುತ್ತಿದೆ ಅನ್ನೋದು ಸಹ ಗೊತ್ತಾಗುವುದಿಲ್ಲ. ಮುಂದಿನ ಕ್ಷಣದಲ್ಲಿ ಮೂವರು ಲಿಫ್ಟ್‌ನಿಂದ ಹೊರಗೆ ಓಡಿಹೋಗುತ್ತಿರುವುದು ಮತ್ತು ಬಲೂನ್‌ಗಳನ್ನು ತಂದ ವ್ಯಕ್ತಿ ಸಮತೋಲನ ಕಳೆದುಕೊಂಡು ನೆಲದ ಮೇಲೆ ಎಡವಿ ಬಿದ್ದ ದೃಶ್ಯ ವಿಡಿಯೋದಲ್ಲಿದೆ.
ಈ ಘಟನೆ ಮುಂಬೈನ ಉಪನಗರ ಗೋರೆಗಾಂವ್‌ನಲ್ಲಿರುವ ಕಟ್ಟಡವೊಂದರಲ್ಲಿ ನಡೆದಿದೆ. ಬಲೂನ್​ ತಂದ ವ್ಯಕ್ತಿ ಮತ್ತು ಮಹಿಳೆ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಬಲೂನ್ ಮಾರಾಟಗಾರನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಬಲೂನ್‌ಗಳಿಗೆ ಯಾವ ರೀತಿಯ ಅನಿಲವನ್ನು ಬಳಸಿದ್ದಾನೆ ಎಂಬುದು ಇನ್ನೂ ತಿಳಿದಿಲ್ಲ. ಅಂದಹಾಗೆ, ಹೀಲಿಯಂ ಬಲೂನ್‌ಗಳು ದಹಿಸಲಾಗದಿದ್ದರೂ, ಅಪರೂಪದ ಹೈಡ್ರೋಜನ್ ತುಂಬಿದ ಬಲೂನ್‌ಗಳು ದಹಿಸಬಲ್ಲವು ಎಂದು ಹೇಳಲಾಗಿದೆ. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net