

ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಕಾರ್ಯಕರ್ತನಾಗಿದ್ದು, ಆನಂತರ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಯನ್ನು ಸ್ಥಾಪಿಸಿದ ಅಭಿಜೀತ್ ದಿಪ್ಕೆ, ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN 2026) ಸಮೀಕ್ಷೆಯ ಪ್ರಕಾರ ಪ್ರಧಾನಿ ಅಭ್ಯರ್ಥಿಯ ಆಯ್ಕೆಯಲ್ಲಿ ತಮ್ಮ ಮಾಜಿ ಬಾಸ್ ಅರವಿಂದ್ ಕೇಜ್ರಿವಾಲ್ ಅವರನ್ನೇ ಹಿಂದಿಕ್ಕಿದ್ದಾರೆ. ದಿಪ್ಕೆ, ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರಿಗಿಂತ ಪ್ರಧಾನಿ ಹುದ್ದೆಗೆ ಹೆಚ್ಚಿನ ಜನರ ಆದ್ಯತೆಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚಿನ ಸಮೀಕ್ಷೆಯಲ್ಲಿ ಕೇಜ್ರಿವಾಲ್ ಪಡೆದ ಶೇಕಡಾ 1.2 ರಷ್ಟು ಬೆಂಬಲವನ್ನು ಮೀರಿ, ದಿಪ್ಕೆ ಶೇಕಡಾ 1.3 ರಷ್ಟು ಬೆಂಬಲ ಗಳಿಸಿದ್ದಾರೆ.
ದೀಪ್ಕೆ ರಾಜಕೀಯ ಪ್ರವೇಶ ಹೀಗಿದೆ!...